ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವು ದಿನನಿತ್ಯದ ಬದುಕನ್ನು ವ್ಯಕ್ತಿ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಭಾರತೀಯರಿಗೆ ತಾತ್ತ್ವಿಕ ಬದುಕು ಮತ್ತು ದೈನಂದಿನ ಧಾರ್ಮಿಕ ನೈತಿಕ ಬದುಕು ಎಂಬುದು ಬೇರೆ ಬೇರೆ ಅಲ್ಲ, ಅವೆರಡೂ ಒಂದೇ. ಅವು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ಸಮನ್ವಯತೆಯೇ ಆಗಿವೆ ಎನ್ನುತ್ತದೆ ಭಗವದ್ಗೀತೆ.