ನರ್ತನಕ್ಕೂ ಅಪ್ಸರೆಯರಿಗೂ ಇರುವ ಅವಿನಾಭಾವ ಸಮಬಂಧವೇನು? ಇವರಿಗೆ ನರ್ತನವನ್ನು ಕಲಿಸಿಕೊಟ್ಟವರಾರು? ಭಾರತ ಭೂಮಿಯ ದೇವಾಲಯಗಳಲ್ಲದೆ ಇನ್ನು ಹಲವಾರು ಸಂಸ್ಕೃತಿಗಳಲ್ಲಿ ಇವರನ್ನು ಹೇಗೆ ಗುರುತಿಸಲಾಗಿದೆ ಎಂದು ಹೇಳುವ ಈ ಲೇಖನದ್ಲಲಿ ನಾಟ್ಯ ಮತ್ತು ಅಪ್ಸರೆಯರ ಬೆಸುಗೆಯನ್ನು ಕಾಣಬಹುದು
ವಾಸ್ತವವಾಗಿ ಕೇಶಾಲಂಕಾರ, ವಸ್ತ್ರಾಲಂಕಾರ, ವೈಯಾರಕ್ಕೆ ಹೆಸರುವಾಸಿಯಾಗಿರುವ ಅಪ್ಸರೆಯರನ್ನು ವೇದ ಸಾಹಿತ್ಯದಲ್ಲಿ, ಮಾಹಾಕಾವ್ಯಗಳಲ್ಲಿ, ಇನ್ನು ಹತ್ತು ಹಲವು ರೀತಿಯ ರಚನೆಗಳಲ್ಲಿ ಅನೇಕಾನೇಕ ಅಲಂಕಾರಗಳಿಂದ ವರ್ಣಿಸಿರುವುದನ್ನು ಕಾಣಬಹುದು. ಸಾಹಿತ್ಯ ಪ್ರಪಂಚದ ಕೆಲವು ಹೆಸರಾಂತ ಅಪ್ಸರೆಯರ ಪರಿಚಯ ಇಲ್ಲಿದೆ.
ಯಗಳಲ್ಲಿ ಕಂಡುಬರುವ ಅದೆಷ್ಟೋ ಶಿಲ್ಪಗಳು ಅಪ್ಸರೆಯರದ್ದು. ಈ ಶಿಲ್ಪಗಳನ್ನು ಕಲ್ಲಿನಲ್ಲಿ ಕೆತ್ತಬೇಕಾದರೆ ಸಾಕಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದಕ್ಕೆಂದೇ ಎಷ್ಟೋ ಶಾಸ್ತ್ರಗ್ರಂಥಗಳಿವೆ.
ಭಾರತೀಯ ಸಂಪ್ರದಾಯದಲ್ಲಿ ಪುರಾಣ- ಪುಣ್ಯಕಥೆಗಳನ್ನು ಕೇಳುವ ಅಥವಾ ಓದುವ ಪದ್ದತಿಗಳು ಅನಾದಿಕಾಲದಿಂದಲೂ ನಡೆದು ಬಂದಿದೆ. ನಮ್ಮ ಸಂಸ್ಕೃತಿಯ ಅಡಿಪಾಯವೆಂದೇ ಗುರುತಿಸಲ್ಪಡುವ ಶೃತಿ-ಸ್ಮೃತಿ ಸಂಪ್ರದಾಯದ ಬಹಳ ಮುಖ್ಯವಾದ ಭಾಗ, ಈ ಕಥೆಗಳು. ಇವುಗಳಿಂದ ಆಯ್ದ ಕೆಲವು ವಿಶೇಷವಾದ, ಮಹತ್ವಪೂರ್ಣವಾದ ಮತ್ತು ಸುಲಭವಾಗಿ ಆಚರಿಸಬಹುದಾದ ವಿಧಿಗಳು ಮತ್ತು ಅವುಗಳಿಗೆ ಸಂಬಂಧಪಟ್ಟ ಕಥೆಗಳು ವ್ರತಕಥೆಗಳ ಭಾಗವಾದವು.
ಸದಾ ನಾವು ನಮ್ಮ ಮನಸ್ಸಾಕ್ಷಿಯನ್ನೇ ಸಮಾಧಾನ ಪಡಿಸುತ್ತಿರಬೇಕೋ ಇಲ್ಲವೇ ಸಮಯಕ್ಕೆ ತಕ್ಕಂತೆ ಮತ್ತು ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳಬೇಕೋ? ಗಾಲವ ಮತ್ತು ಮಾಧವೀಯರ ಕಥೆ ಆತ್ಮ ಸಾಕ್ಷಿ, ಸಮಯಪ್ರಜ್ಞೆ ಮತ್ತು ಧ್ಯೇಯ ಸಾಧನೆಗೆ ಅಗತ್ಯವಿರುವ ನಿಶ್ಚಲ ಮನಸ್ಸಿನ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
Did Yayati help Gaalav just to escape the wrath of Vishwamitra’s curse? Did he not contemplate before offering Madhavi? This story lets you explore the thought process of two important personalities of our history, when at crossroads.
ಶಿವ ಮತ್ತು ಕೇಶವನ ಅಭಿನ್ನತ್ವವನ್ನು ವ್ಯಾಸರು ಸ್ಪಷ್ಟವಾಗಿ ವಿವರಿಸಿ ಹೇಳಿದ್ದಾರೆ. ವ್ಯಾಸರಿಂದಲೇ ವಿಷ್ಣು ಸಹಸ್ರನಾಮ ಮತ್ತು ಶಿವ ಸಹಸ್ರನಾಮವೆರಡೂ ನಮಗೆ ಪಂಚಮ ವೇದದಲ್ಲಿ ಪ್ರಾಪ್ತಿಯಾಗಿದೆ. ಈ ಮಹಾಕಾವ್ಯದಲ್ಲಿ ಶಿವನು ವಿಷ್ಣುವಿನ ಆತ್ಮಸ್ವರೂಪಿ ಎಂದೂ ವಿಷ್ಣುವೂ ಶಿವನ ಆತ್ಮಸ್ವರೂಪಿ ಎಂದೂ ಸಾಬೀತುಪಡಿಸುವು ಅನೇಕ ಪ್ರಸಂಗಗಳಿವೆ. ಶಿವ ಮತ್ತು ವಿಷ್ಣುವು ಹರಿಹರರಾಗಿ ಜಗತ್ತಿನಲ್ಲಿ ಶುಭವನ್ನುಂಟು ಮಾಡುತ್ತಾರೆ. ಮಹಾಭಾರತದಲ್ಲಿ ಇವರೀರ್ವರು ಜೊತೆಗೂಡಿ ದ್ವಾಪರ ಯುಗದಲ್ಲಿ ಧರ್ಮವನ್ನು ಸಂಸ್ಥಾಪಿಸಿ ಜಗದೋದ್ಧಾರಕರಾಗಿ ಮಂಗಳವನ್ನುಂಟು ಮಾಡುತ್ತಾರೆ.
An avid admirer of Bharathiya Kala from performing arts, culinary, textiles, handicrafts to literature. Ithihaasa and Puraana are Kaveri's go-to genre to read and write about. She is also a craft enthusiast and a disciple of Sanskrit.