close logo

ಯೋಗ ನಿತ್ಯನಿರಂತರ ಸಾಧನಾ ಪಥ

ಯೋಗ ಎಂದರೇನು?

ಯೋಗ ಎಂಬ  ಶಬ್ದ ಸಂಸ್ಕೃತ ಬಾಷೆಯಯುಜ್ಎಂಬ ಪದದಿಂದ ಆಗಿದೆ. ಯೋಗವೆಂದರೆಜೋಡಿಸು‘ ‘ಸೇರಿಸು‘ ‘ಕೂಡಿಸುಎಂಬ ಆರ್ಥ ಬರುತ್ತದೆ. ಯೋಗವೆಂದರೆಸಮಾಧಿಉಪಾಯ‘ ‘ಸಾಧನಎಂಬ ಅರ್ಥವೂ ಬರುತ್ತದೆ. ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ , ಬಾವನೆ ಹಾಗೂ ಆತ್ಮವನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ. ಆಧ್ಯಾತ್ಮದ ದೃಷ್ಟಿಯಲ್ಲಿ ಆತ್ಮನೊಂದಿಗೆ ಪರಮಾತ್ಮನನ್ನು ಸೇರಿಸುವುದು ಅಥವಾ ಲೀನವಾಗಿಸುವುದು ಎಂದಾಗುತ್ತದೆ. “ಯೋಗೋ ಉಪಾಯ ಉದ್ದಿಷ್ಟ:” ಮೋಕ್ಷಕ್ಕೆ ಉತ್ತಮ ಉಪಾಯ ಯೋಗ. ಪತಂಜಲಿ ಮಹರ್ಷಿಗಳು ಯೋಗ ಎಂದರೆಯೋಗಶ್ಚಿತ್ತ ವೃತ್ತಿ ನಿರೋಧ:” ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿಸುವುದು ಯೋಗದ ಉದ್ದೇಶ. ನಮ್ಮೆಲ್ಲರ ಅಭ್ಯುದಯಕ್ಕೆ ಯೋಗ ಅತ್ಯಂತ ಸಹಕಾರಿಯಾದದ್ದು. ಸಾಧನಾ ಪಥದಲ್ಲಿ ಹಂತ ಹಂತವಾಗಿ ವ್ಯಕ್ತಿಯೋರ್ವನ ದೈಹಿಕ ಮತ್ತು ಮಾನಸಿಕ ಶಕ್ತಿಯ ವರ್ಧನೆಗೆ ಬೆನ್ನೆಲುಬಾಗಿ ನಿಲ್ಲುವ ಸಾಮರ್ಥ್ಯವಿರುವುದು ಯೋಗಕ್ಕೆ ಮಾತ್ರ

ಯೋಗದ ಅಭ್ಯಾಸವನ್ನೇಕೆ ಮಾಡಬೇಕು?

ಒಂದು ಊರಲ್ಲಿ ಒಬ್ಬ ಭಿಕ್ಷುಕ ಭಿಕ್ಷೆ ಬೇಡುತ್ತಾ ತಿರುಗುತ್ತಿದ್ದ. ಸಾಯಂಕಾಲದ ಸಮಯ ಒಂದು ದೊಡ್ಡ ಬಂಗಲೆ ಮುಂದೆ ಬಂದ ಸ್ವಲ್ಪ ಒಳಗಡೆ ಹೋಗಿ ನೋಡಿದ ಅಲ್ಲಿ ಹತ್ತಾರು ಕಾರುಗಳು ನಿಂತಿವೆ. ಚಿಕ್ಕ ಮಕ್ಕಳು ಆಟವಾಡುತ್ತಿದ್ದಾರೆ. ಸುಂದರ ಸ್ತ್ರೀ ಮನೆಯ ಯಜಮಾನತಿ ಜೋಕಾಲಿಯ ಮೇಲೆ ಕೂತು ತುಗಾಡುತ್ತಿದ್ದಾಳೆ. ಸುತ್ತ ನೌಕರರು ನಿಂತಿದ್ದಾರೆ. ಇಷ್ಟೆಲ್ಲಾ ಸಂಪತ್ತು ಐಶ್ವರ್ಯ ನೋಡಿ ಭಿಕ್ಷುಕ ಆಸೆ ಪಟ್ಟ ಇವರು ದೊಡ್ಡ ಶ್ರೀಮಂತರು ನನಗೆ ಇಲ್ಲಿ ಏನಾದರೂ ಸಿಗಬಹುದು ಎಂದು ಕೊಂಡ. ಆಗ ಅಲ್ಲಿದ್ದ ಒಬ್ಬ ಕೆಲಸದಾತನಿಗೆ ಕೇಳಿದ ನನಗೆ ಏನಾದರೂ ಭಿಕ್ಷೆ ಬೇಕು ಮನೆ ಯಜಮಾನ ಯಾರು ನಾನು ಅವರಿಗೆ ಭಿಕ್ಷೆ ಕೇಳುತ್ತೇನೆ ಎಂದು ಮನುಷ್ಯನಿಗೆ ಭಿಕ್ಷುಕ ಕೇಳುತ್ತಾನೆ. ಆಗ ಕೆಲಸದಾತ ಅಲ್ಲಿ ಕುರ್ಚಿಯ ಮೇಲೆ ಕರಿ ಕನ್ನಡಿಗ ಇಟ್ಟುಕೊಂಡು ಕೂತಿದ್ದಾರಲ್ಲ ಅವರೇ ಮನೆ ಯಜಮಾನರು. ಬೇಕಿದ್ದಲ್ಲಿ ಹೋಗಿ ಕೇಳು ಎನ್ನುತ್ತಾನೆ. ಆಗ ಭಿಕ್ಷುಕ ಯಜಮಾನರ ಹತ್ತಿರ ಹೋಗಿ ನಮಸ್ಕರಿಸಿ ಸಾಹುಕಾರರೇ ನಾನು ಬಡವ ಹಾಗೂ ಭಿಕ್ಷುಕ ತಾವು ಬಹಳ ಶ್ರೀಮಂತರು ಹಾಗೂ ಅದೃಷ್ಟಶಾಲಿಗಳು ನನಗೆ ಏನಾದರೂ ದಾನ ಮಾಡಿ ಎಂದು ಕೇಳುತ್ತಾನೆ. ಆಗ ಯಜಮಾನ ಹೇಳುತ್ತಾನೆ ಹೌದು ನಾನು ಬಹಳ ಶ್ರೀಮಂತ ದೊಡ್ಡ ಬಂಗಲಿ ನನ್ನದು. ಅಲ್ಲಿ ಆಡುತ್ತಿರುವ ಮಕ್ಕಳು ನನ್ನವು. ನಿಂತಿರುವ ಎಲ್ಲ ಕಾರುಗಳು ನನ್ನವು. ಜೋಕಾಲಿ ಮೇಲೆ ತೂಗುತ್ತಿರುವ ಸುಂದರ ಮಹಿಳೆ ನನ್ನ ಹೆಂಡತಿ. ನನಗೆ ಅಷ್ಟೈಶ್ವರ್ಯ ಇದೆ. ಇಲ್ಲವೆಂದು ನಾನು ಹೇಳುತ್ತಿಲ್ಲ ನಾನು ಅಗರ್ಭ ಶ್ರೀಮಂತ. ನಿನಗೆ ಏನು ಬೇಕು ಹೇಳು ನಾನು ಕೊಡಲು ಸಿದ್ಧ .ಆದರೆ ನನ್ನದೊಂದು ಚಿಕ್ಕ ಅಪೇಕ್ಷೆ ಇದೆ ನೀನು ಈಡೇರಿಸಬೇಕು ಎಂದು ಕೇಳುತ್ತಾನೆ. ಆಗ ಭಿಕ್ಷುಕ ನನ್ನ ಹತ್ತಿರ ಏನೂ ಇಲ್ಲ ನಾನು ತುಂಬಾ ಬಡವ ಹಾಗೂ ಭಿಕ್ಷುಕ ಯಜಮಾನರೇ ತಮ್ಮಂತವರಿಗೆ ನಾನೇನು ಕೊಡಬಲ್ಲೆ ಎಂದು ಕೇಳುತ್ತಾನೆ. ಆಗ ಶ್ರೀಮಂತ ತನ್ನ ಕರಿಯ ಕನ್ನಡಿ ತೆಗೆದು ಹೇಳುತ್ತಾನೆ ನನಗೆ ಎರಡು ಕಣ್ಣು ಕಾಣಿಸುವುದಿಲ್ಲ. ನನ್ನನ್ನು ಇಲ್ಲಿ ತಂದು ಕೂಡಿಸಿದ್ದಾರೆ. ಯಾರಾದರೂ ಒಳಗೆ ಕರೆದುಕೊಂಡು ಹೋಗಬೇಕು. ತಟ್ಟೆಯಲ್ಲಿ ಊಟ ಬಡಿಸಿದ ನಂತರ ಯಾವ ಭಾಗದಲ್ಲಿ ಏನಿದೆ ಅವರು ಹೇಳಿದರೆ ಮಾತ್ರ ನನಗೆ ತಿಳಿಯುತ್ತದೆ. ನನಗೆ ಸಕ್ಕರೆ ಕಾಯಿಲೆ ಬಿಪಿ ಇದೆ ಏನು ತಿನ್ನುವ ಹಾಗಿಲ್ಲ. ಸ್ನಾನ ಬಹಿರ್ದೇಶ ಗಳಿಗೆ ನನ್ನನ್ನು ಕೈಹಿಡಿದು ಕರೆದುಕೊಂಡು ಹೋಗಬೇಕು. ಯಾವ ಊರಿಗೆ ಹೋದರು ಯಾವ ತೀರ್ಥಕ್ಷೇತ್ರಕ್ಕೆ ಹೋದರು ನನಗೆ ಏನೂ ಕಾಣಿಸುವುದಿಲ್ಲ. ಇಂಥ ದೀನ ಪರಿಸ್ಥಿತಿಯಲ್ಲಿ ನಾನು ಇದ್ದೇನೆ. ಭಗವಂತ ನಿನಗೆ ಕೈಕಾಲು ಗಟ್ಟಿಯಾಗಿ ಕೊಟ್ಟಿದ್ದಾನೆ ನೀನು ಒಬ್ಬನೇ ತಿರುಗಾಡುತ್ತಿದ್ದಿಊಟ ಮಾಡಿದ್ದು ಜೀರ್ಣವಾಗುತ್ತದೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಎರಡು ಕಣ್ಣುಗಳು ಕಾಣಿಸುತ್ತವೆ. ನನ್ನ ದೃಷ್ಟಿಯಲ್ಲಿ ನೀನೆ ಪುಣ್ಯವಂತ. ನಿನ್ನ ಎರಡು ಕಣ್ಣುಗಳನ್ನು ನನಗೆ ಕೊಡು. ನಿನಗೆ ಏನು ಬೇಕು ಹೇಳು, ನಾನು ಕೊಡುತ್ತೇನೆ. ಎಂದು ಶ್ರೀಮಂತ ಹೇಳುತ್ತಾನೆ. ಆಗ ಬಡವ ಭಿಕ್ಷುಕನಿಗೆ ಗಾಬರಿಯಾಗುತ್ತದೆ ಅಲ್ಲಿ ನಿಲ್ಲುವುದೇ ಇಲ್ಲ ಹೊರಟೇಬಿಡುತ್ತಾನೆ. ಹಾದಿಯಲ್ಲಿ ಆಲೋಚಿಸುತ್ತಾನೆ ಶ್ರೀಮಂತನಿಗಿಂತ ನಾನೇ ಶ್ರೀಮಂತ. ನನಗೆ ಕೈಯಿ ಕಾಲು ಕಣ್ಣು ಶರೀರ ಎಲ್ಲ ಆರೋಗ್ಯವಾಗಿದೆ. ಕಣ್ಣುಗಳು ಕಾಣಿಸುತ್ತವೆ. ಭಗವಂತ ಪ್ರತಿನಿತ್ಯ ಆಹಾರ ಕೊಡುತ್ತಿದ್ದಾನೆ ಇಷ್ಟೇ ಸಾಕು ಎಂದುಕೊಂಡನಂತೆ.

ನೋಡಿ ಕಣ್ಣುಗಳ ಮಹತ್ವ ಸರ್ವೆಂದ್ರಿಯಣಾಂ ನಯನಂ ಪ್ರಧಾನಂ. ಎಂದಿದ್ದಾರೆ. ಸಂಪತ್ತು ಹಣ ಬಂಧು ಬಳಗ ಮಿತ್ರರು ಭೂಮಿ ಆಸ್ತಿ ಎಲ್ಲ ಇದ್ದು ಆರೋಗ್ಯ ಇಲ್ಲದಿದ್ದರೆ ಎಲ್ಲ ವ್ಯರ್ಥ. ಕೆಲವರ ಮನೆಯಲ್ಲಿ ಶುಭಕಾರ್ಯದಲ್ಲಿ ಮನೆಯಲ್ಲಿ ಅನೇಕ ಪಕ್ವಾನ್ ಸಿಹಿ ತಿಂಡಿ ಮಾಡಿರುತ್ತಾರೆ ಮನೆ ಯಜಮಾನ ನಿಗೆ ಶುಗರ್ ಇದ್ದ ಕಾರಣ ಸಿಹಿ ತಿನ್ನುವ ಹಾಗಿಲ್ಲ ಅವರ ಮನೆಯಲ್ಲಿ ಕೆಲಸ ಮಾಡುವ ವ್ಯಕ್ತಿ 10. 12 ಗುಲಾಬ್ ಜಾಮೂನ್ ತಿನ್ನುತ್ತಾನೆ ಅವನಿಗೆ ಜೀರ್ಣವಾಗುತ್ತದೆ ಆದರೆ ಮನೆ ಯಜಮಾನ ಶ್ರೀಮಂತ ಒಂದು ಗುಲಾಬ್ ಜಾಮುನ್ ತಿನ್ನುವ ಹಾಗಿಲ್ಲ ನೋಡಿ ಇಬ್ಬರ ದೈವ. ಕಾರಣ ಬನ್ನಿ ಇಂದಿನಿಂದ ಪ್ರತಿನಿತ್ಯ ನಾವೆಲ್ಲ ಅರ್ಧ ಗಂಟೆ ಯೋಗ ಧ್ಯಾನ ಮಾಡೋಣ.

ಇದು ಲೌಕಿಕ ಸ್ವರೂಪದ ಪ್ರಮುಖ ಕಾರಣವಾದರೆ, ಅಲೌಕಿಕ ಪಥಕ್ಕೂ ಇದು ನೆರವಾಗಬಲ್ಲದೆಂಬುದು ಮತ್ತೊಂದು ಪ್ರಮುಖ ಅಂಶ. ಹೀಗಾಗಿ ಸಾಧನಾಮಾರ್ಗದಲ್ಲಿ ಪ್ರಶಸ್ತವಾಗಿ ಸಾಗುವ ಸಾರ್ಥಕ ಬಗೆ ಯೋಗ ಎನ್ನಬಹುದು. ಯಮನಿಯಮದಿಂದ ಸಮಾಧಿಯವರೆಗೆ ಹಂತಹಂತವಾಗಿ ಸಾಧನೆ ಮಾಡುತ್ತ, ಚಿತ್ತವೃತ್ತಿ ನಿರೋಧವನ್ನು ಸಾಧಿಸಿಅಂದರೆ ಮನಸ್ಸಿನಲ್ಲಿರುವ ಅಲೆಗಳನ್ನು ವಿವಿಧ ಯೋಗಾಭ್ಯಾಸಗಳಿಂದ ನಿಯಂತ್ರಿಸಿ, ಸ್ತಬ್ಧೀಕರಿಸಿ, ಮತ್ತು ಕ್ಲೇಶ ಸಂಸ್ಕಾರಗಳನ್ನು ಶಮನಗೊಳಿಸಿ ಯೋಗಿ ಸಮಾಧಿ ಸ್ಥಿತಿಯನ್ನು ಅನುಭವಿಸುತ್ತಾನೆ.

ಪತಂಜಲಿ ಮಹರ್ಷಿಯ ಸಮಕಾಲೀನ ಮತ್ತು ಅದಕ್ಕೂ ಪೂರ್ವಭಾವಿಯಾಗಿ ಅನುಷ್ಠಾನಕ್ಕೆ ಬಂದಂಥ ಆಧ್ಯಾತ್ಮಿಕ ಚಿಂತನೆ ಮತ್ತು ಅದರ ಪ್ರಾಯೋಗಿಕ ಅಭ್ಯಾಸಗಳ ಸಾರವೇಪಾತಂಜಲ ಯೋಗ ಸೂತ್ರ’. ಇದು ಸಂಕ್ಷಿಪ್ತವಾಗಿ ಆಧ್ಯಾತ್ಮಿಕ ಸತ್ಯ ಮತ್ತು ಅದರ ಸಾಧನಾ ಮಾರ್ಗವನ್ನು ತಿಳಿಸುವ ಸೂತ್ರಸಾಹಿತ್ಯ. ‘ಯೋಗಸೂತ್ರಮಾನವನ ಮುಖ್ಯ ಉಪಕರಣವಾದ ಮನಸ್ಸಿನ ಪ್ರಕ್ರಿಯೆಗಳನ್ನು ಆಳವಾಗಿ ಅರಿತು,   ನೇರ ಮತ್ತು ಹಂತಹಂತವಾಗಿ ನಮಗೆ ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶನ ಮಾಡುವ ಪ್ರಾಯೋಗಿಕ ಗ್ರಂಥ. ಆದ್ದರಿಂದ ಆಧ್ಯಾತ್ಮಿಕ ಸಾಧಕರ ಜೀವನದಲ್ಲಿ ಇದಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಭಾರತದಲ್ಲಿ ಪತಂಜಲಿ ಮಹರ್ಷಿಗಿಂತ ಮೊದಲೇ ಯೋಗ ಸಾಧನೆಯು ಬೇರೆ ಬೇರೆ ಮೂಲಗಳಿಂದ ಉಗಮವಾದ ಆಧ್ಯಾತ್ಮಿಕ ಪರಂಪರೆಗಳಲ್ಲಿ ಪ್ರಚಲಿತವಾಗಿತ್ತು. ಪತಂಜಲಿ ಮಹರ್ಷಿ ಅವುಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ಸಮನ್ವಯೀಕರಿಸಿ ಅದರ ಮುಖ್ಯಾಂಶಗಳನ್ನು ಅನುಕ್ರಮವಾಗಿ ಸೂತ್ರ ರೂಪದಲ್ಲಿ ನಮಗೆ ನೀಡಿದ್ದಾರೆ.

ಯೋಗಸೂತ್ರವು ಸಾಂಖ್ಯತತ್ತ್ವವನ್ನು ಆಧರಿಸಿದೆ. ಯೋಗದ ಆತ್ಯಂತಿಕ ಗುರಿಯೇ ಪ್ರಕೃತಿಪುರುಷರ ವಿಯೋಗ ಮತ್ತು ತನ್ಮೂಲಕ ಕೈವಲ್ಯವನ್ನು ಪಡೆಯುವುದು. ಯೋಗಸಾಧನೆಯ ಮುಖ್ಯ ಉದ್ದೇಶ ಚಿತ್ತವೃತ್ತಿ ನಿರೋಧದ ಮೂಲಕ ಏಕಾಗ್ರತೆ ಪಡೆಯುವುದು. ನಿರೋಧವೆಂದರೆ ಕ್ಲೇಶಸಂಸ್ಕಾರಗಳನ್ನು ಹಾಗೂ ಕ್ಲೇಶವೃತ್ತಿಯನ್ನು ನಿಷ್ಕ್ರಿಯಗೊಳಿಸುವುದು. ಚಿತ್ತದಲ್ಲಿ ಉದ್ಭವವಾಗುವ ಚಿಂತನೆಯ ಅಲೆಗಳಿಗೆವೃತ್ತಿಗಳೆಂದು ಹೆಸರು. ಶ್ರೀಶಂಕರರು ಚಿತ್ತವೃತ್ತಿಯನ್ನು ಪ್ರತ್ಯಯ ಎಂದು ಕರೆದಿದ್ದಾರೆ. ಚಿತ್ತದಲ್ಲಿ ಏಳುವ ವೃತ್ತಿಗಳ ಮೂಲಕ ಮಾತ್ರ ಪ್ರಪಂಚದಲ್ಲಿರುವ ವಿಷಯಗಳ ಮತ್ತು ವಸ್ತುಗಳ ಜ್ಞಾನವುಂಟಾಗುವುದು. ಆದ್ದರಿಂದ ಪಂಚಶಿಖಾಚಾರ್ಯರುಏಕಮೇವ ದರ್ಶನಂವೃತ್ತಿರೇವ ದರ್ಶನಂಎಂದು ಹೇಳುತ್ತಾರೆ. ವೃತ್ತಿಜ್ಞಾನವನ್ನೇಖ್ಯಾತಿಯೆಂದು ಕರೆದಿದ್ದಾರೆ. ಮನಸ್ಸಿನ ಮೂಲಕ ಪಡೆಯುವ ಎಲ್ಲ ಜ್ಞಾನಗಳಿಗೂಖ್ಯಾತಿಎಂದು ಹೆಸರು.

ಮನುಷ್ಯನ ರಚನೆಯಲ್ಲಿ ಪ್ರಕೃತಿಯ ಆಶ್ರಯದಲ್ಲಿದ್ದ ಮನಸ್ಸನ್ನು ಅಷ್ಟಾಂಗಮಾರ್ಗಗಳ ಮೂಲಕ ಮತ್ತು ಕ್ರಿಯಾಯೋಗದ ಮೂಲಕ ಮನಸ್ಸಿನಲ್ಲಿರುವ ಕ್ಲೇಶಸಂಸ್ಕಾರಗಳನ್ನು ನಿರೋಧಿಸುವುದು, ಅಂದರೆ ನಿಷ್ಕ್ರಿಯಗೊಳಿಸುವುದುಇದು ಯೋಗಸಾಧನೆಯ ಪ್ರಮುಖ ಘಟ್ಟ. ಅಭ್ಯಾಸ ಮತ್ತು ವೈರಾಗ್ಯದಿಂದ ಕೂಡ ಮನಸ್ಸಿನ ವೃತ್ತಿಗೆ ಮೂಲಕಾರಣವಾದ ಅವಿದ್ಯಾಜನಿತ ಸಂಸ್ಕಾರಗಳನ್ನು ನಿರೋಧಿಸಲಾಗುತ್ತದೆ. ಮನುಷ್ಯನ ರಚನೆಯಲ್ಲಿ ಅಭಿವ್ಯಕ್ತವಾದ ಮತ್ತು ಅವಿದ್ಯೆಗೆ ಕಾರಣವಾದ ಪ್ರಕೃತಿಯ ವಿವಿಧ ಸ್ತರಗಳ ಕೋಟೆಯನ್ನು ಭೇದಿಸಿ, ಚೈತನ್ಯದ ಅನುಭೂತಿಯನ್ನು ಕೊಡುವ ಅಸಂಪ್ರಜ್ಞಾತ ಎಂಬ ಸಮಾಧಿಯ ಅಂತಿಮ ಸ್ಥಿತಿಯ ಮೂಲಕ ಕೈವಲ್ಯವನ್ನು ಪಡೆಯುವುದು ಯೋಗ ಸಾಧನೆಯ ಪರಮಗುರಿ. ಹೀಗೆ ಚಿತ್ತವೃತ್ತಿ ನಿರೋಧದ ಮೂಲಕ ಪುರುಷ (ಚೈತನ್ಯ) ಮತ್ತು ಪ್ರಕೃತಿಯ ಸಂಯೋಗವನ್ನು ವಿಂಗಡಿಸಿದಾಗ ಯೋಗ ಸೂತ್ರವು ಹೇಳುವಂತೆ, ‘ತದಾ ದ್ರಷ್ಟುಃ ಸ್ವರೂಪೇ ಅವಸ್ಥಾನಮ್ಅಂದರೆ, ಪುರುಷನು ಮಾತ್ರ ತಾನು ತಾನಾಗಿಯೇ ಧ್ಯಾನದಲ್ಲಿ ನೆಲೆನಿಂತಾಗ ಸಮಾಧಿಯ ಅನುಭವವಾಗುವುದು.

ಕೈವಲ್ಯವನ್ನು ಪಡೆಯಲುಯೋಗಸೂತ್ರಮುಖ್ಯವಾಗಿ ಅಷ್ಟಾಂಗ ಯೋಗದ ಸಾಧನಾಪ್ರಣಾಳಿಯನ್ನು ಸೂಚಿಸುತ್ತದೆ. ನಂತರ ಧ್ಯಾನದ ಅಭ್ಯಾಸದಿಂದ ಉತ್ಪನ್ನವಾದ ಅಂತಃಪ್ರಜ್ಞೆಯ ಮೂಲಕ ವಿವೇಕಖ್ಯಾತಿ ಎಂಬ ಪ್ರಜ್ಞಾವೃತ್ತಿ ಪ್ರಾಪ್ತವಾಗುವುದು. ಅನುಭವದ ಸ್ಥಿತಿಯಲ್ಲಿ ಜನಿತವಾದ ಪ್ರಸಂಖ್ಯಾನಾಗ್ನಿ ಸಂಸ್ಕಾರಗಳನ್ನು ಧಗ್ಧಬೀಜವಾಗಿಸಿ. ಪುನಃ ಅವುಗಳು ಅಂಕುರಿಸುವ ಶಕ್ತಿಯನ್ನು ನಾಶಮಾಡುತ್ತದೆ. ತೀವ್ರವಾದ ಸಂಪ್ರಜ್ಞಾತ ಸ್ಥಿತಿಯ ಧ್ಯಾನದಿಂದ ಉತ್ಪನ್ನವಾದ ಪ್ರಜ್ಞೆಯ ಬೆಳಕಾದ, ಪ್ರಸಂಖ್ಯಾನಾಗ್ನಿಯಿಂದ ಸಮಸ್ತ ಸಂಸ್ಕಾರವೂ ನಾಶವಾಗಿ, ಯೋಗಿಯು ಅಸಂಪ್ರಜ್ಞಾತ ಎಂಬ ಉನ್ನತ ಸಮಾಧಿಸ್ಥಿತಿಯಲ್ಲಿ ಆರೂಢನಾಗುತ್ತಾನೆ. ಹೀಗೆ ಯೋಗಸಾಧಕನು ಅಸಂಪ್ರಜ್ಞಾತ ಸಮಾಧಿ ಮೂಲಕ ಪುರುಷಪ್ರಕೃತಿ ವಿಯೋಗ ಹೊಂದಿ ಕೈವಲ್ಯ ಪದವನ್ನು ಪಡೆಯುತ್ತಾನೆ.

ಹೀಗೆಯೋಗಸೂತ್ರದಲ್ಲಿ ಪ್ರಸಿದ್ಧವಾದ ಸಾಧನಾಕ್ರಮವೇ ಅಷ್ಟಾಂಗಯೋಗ.

ಅಷ್ಟಾಂಗಯೋಗ: ಪಾತಂಜಲ ಯೋಗಸೂತ್ರದಲ್ಲಿ ಕಂಡುಬರುವ ಸಾಧನ ಮಾರ್ಗಗಳಲ್ಲಿ ಅಷ್ಟಾಂಗ ಯೋಗ ಅತ್ಯಂತ ಪ್ರಚಲಿತ. ಇದು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿಎಂಬ ಎಂಟು ಹಂತಗಳನ್ನು ಒಳಗೊಂಡಿದೆ. ಪಾತಂಜಲ ಮಹರ್ಷಿಯ ಸಮಕಾಲೀನ ಭಾರತದಲ್ಲಿ ಪ್ರಚಲಿತವಾದ ಎಲ್ಲ ಸಾಧನಾ ವಿಜ್ಞಾನದ ವಿವಿಧ ಪ್ರಾಯೋಗಿಕ ವಿಷಯಗಳನ್ನು ಇಲ್ಲಿ ಸಮುಚ್ಚಯಗೊಳಿಸಲಾಗಿದೆ. ಇದು ಮನುಷ್ಯನ ವ್ಯಕ್ತಿತ್ವದ ರಚನೆ, ಮನೋವಿಜ್ಞಾನ, ಸಂಸ್ಕಾರ, ಜೀವನಕ್ರಮ, ಪ್ರಕೃತಿ ನಿಯಮ ಮತ್ತು ಮನುಷ್ಯನಲ್ಲಿ ಅಂತರ್ಗತವಾಗಿರುವ ದೈವೀ ಚೈತನ್ಯ ಮುಂತಾದವುಗಳನ್ನು ಪರಿಗಣಿಸಿ ಆಧ್ಯಾತ್ಮಿಕ ಗುರಿಯನ್ನು ಸಾಧಿಸಲು ಅನುವು ಮಾಡಿಕೊಡುವ ಸೂಕ್ತವೂ, ಸ್ಪಷ್ಟವೂ ಆದ ಸಾಧನ ಮಾರ್ಗ. ಎಲ್ಲ ಅವಶ್ಯಕ ವಿಷಯಗಳನ್ನು ಅಳವಡಿಸಿಕೊಂಡು, ಅವುಗಳನ್ನು ಎಂಟು ಹಂತಗಳನ್ನಾಗಿ ಕ್ರಮವಾಗಿ ವಿಂಗಡಿಸಿ, ಅಭ್ಯಾಸ ಮಾಡಲು ಸುಲಭವಾಗುವಂತೆ ಸಿದ್ಧಪಡಿಸಿದ ಪರಿಣಾಮಕಾರಿ ಸಾಧನ ಮಾರ್ಗವಾಗಿದೆ ಇದು. ಗೀತೆಯಲ್ಲಿ ಉಲ್ಲೇಖಿಸಿದ ಸಾಂಖ್ಯಯೋಗ, ಕರ್ಮಯೋಗ, ಭಕ್ತಿಯೋಗ, ಧ್ಯಾನಯೋಗ, ಜ್ಞಾನಯೋಗ, ಮೊದಲಾದ ವಿವಿಧ ಯೋಗ ಮಾರ್ಗಗಳ ಪ್ರಾಯೋಗಿಕ ಸಾರವನ್ನು ಅಷ್ಟಾಂಗಯೋಗದಲ್ಲಿ ಅಳವಡಿಸಿಕೊಂಡಂತೆ ತೋರುತ್ತದೆ.

  1. ಕರ್ಮಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಕರ್ಮಯೋಗವೂ ಒಂದು.’ಕರ್ಮಎಂಬ ಶಬ್ದವುಕೃಎಂಬ ಧಾತುವಿನಿಂದ ಹುಟ್ಟಿರುತ್ತದೆ.’ಕೃಎಂದರೆ ಮಾಡುವುದು,ವ್ಯವಹರಿಸುವುದು ಮುಂತಾಗಿ ಅರ್ಥಗಳಿವೆ. ಹಾಗಾಗಿ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ.ಹಿಂದೂಧರ್ಮದಲ್ಲಿ ಪ್ರತಿಪಾದಿಸಿದಂತೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ ಮಾಡುತ್ತಲೇ ಇರುತ್ತಾನೆ. ಕರ್ಮಗಳಿಂದ ಜೀವಿಗೆ ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲ ದೊರೆಯುತ್ತದೆ. ರೀತಿ ಕೆಲಸಗಳನ್ನು ಮಾಡುತ್ತಾ ಅದಕ್ಕೆ ಪ್ರತಿಫಲಗಳನ್ನು ಪಡೆಯುತ್ತಾ ಜೀವಿಯುಕರ್ಮಬಂಧಕ್ಕೆ ಒಳಗಾಗುತ್ತಾನೆ.ಇದರಿಂದಾಗಿ ಮತ್ತೆ ಮತ್ತೆ ಹುಟ್ಟು ಸಾವುಗಳ ಚಕ್ರಕ್ಕೆ ಸಿಲುಕುತ್ತಾನೆ.ತಾನು ಮಾಡುವ ಕೆಲಸಗಳಿಂದ ಯಾವಾಗಕರ್ಮಬಂಧಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮಮುಕ್ತನಾಗುತ್ತಾನೆ.ಒಂದೆಡೆ ಕೆಲಸಗಳು ಜೀವಿಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜೀವಿಯ ಕರ್ಮವಿಮೋಚನೆಗೆ ಸಾಧನವಾಗುತ್ತದೆ. ರೀತಿ ಜೀವಿಯು ಮಾಡುವ ಕೆಲಸಗಳನ್ನು ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳು ಜೀವಿಯ ಆತ್ಮಸಾಕ್ಷಾತ್ಕಾರಕ್ಕೆ,ಮುಕ್ತಿಗೆ ಸಾಧನವನ್ನಾಗಿಸುವುದೇ ಕರ್ಮಯೋಗ.
  2. ಜ್ಞಾನಯೋಗಇದು ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಜ್ಞಾನಮಾರ್ಗ ಎಂದೂ ಕರೆಯಲಾಗುತ್ತದೆ. ಜ್ಞಾನ ಎಂದರೆ ವಿಚಾರ,ತಿಳುವಳಿಕೆ. ಜ್ಞಾನಯೋಗ ಎಂದರೆ ವಿಚಾರ, ವಿವೇಕಗಳ ಮೂಲಕ ಜೀವಾತ್ಮನು ಪ್ರಪಂಚದ ಬಂಧನಗಳಿಂದ ಮುಕ್ತನಾಗಿ ಪರಮಾತ್ಮನಲ್ಲಿ ಐಕ್ಯನಾಗುವುದು ಅಥವಾ ಮೋಕ್ಷ ಪಡೆಯುವುದು. ಬ್ರಹ್ಮವೊಂದೇ ಸತ್ಯ, ಉಳಿದುದೆಲ್ಲವೂ ಮಿಥ್ಯೆ ಎಂಬುದನ್ನು ವಿಚಾರದ ಮೂಲಕ, ವಿವೇಕದ ಮೂಲಕ ಜೀವನು ತಿಳಿದುಕೊಂಡು ಬ್ರಹ್ಮ ಸಾಕ್ಷಾತ್ಕಾರ ಪಡೆಯುವುದೇ ಜ್ಞಾನಯೋಗ.
  1. ಭಕ್ತಿಯೋಗಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಭಕ್ತಿ ಎಂದರೆ ಪ್ರೀತಿ,ಸೇವೆ ಎಂದು ಅರ್ಥ. ದೇವರನ್ನು ಪ್ರೀತಿಸುತ್ತಾ, ಜೀವನದ ಸಕಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಎಂದು ನಡೆಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಸಾಧನಾ ಮಾರ್ಗವೇ ಭಕ್ತಿಯೋಗ.

ಇವುಗಳನ್ನೆಲ್ಲ ಅಳವಡಿಸಿಕೊಂಡು ನಿಜವಾಗಿ ಅಧ್ಯಾತ್ಮ ಸಾಧನೆಯನ್ನು ಕೈಗೊಳ್ಳಲು ಬಯಸುವ ಸಾಧಕರು ಪಾತಂಜಲ ಅಷ್ಟಾಂಗ ಯೋಗವನ್ನು ಅಧ್ಯಯನ ಮಾಡಿ ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಂಡರೆ ಸಾಧನೆಯ ಪಥ ಸುಗಮವಾಗುವುದು. ಸಾಧನೆಗೆ ಅತ್ಯಗತ್ಯವಾದ ಮನೋನಿಗ್ರಹ ಮತ್ತು ಇಂದ್ರಿಯ ನಿಗ್ರಹ ಸಾಧಿಸಲು ಬೇಕಾದ ಮನೋವೈಜ್ಞಾನಿಕ ತಿಳಿವಳಿಕೆ ಇದರಿಂದ ದೊರಕುವುದು.

ಯಮನಿಯಮದಿಂದ ಸಮಾಧಿಯವರೆಗೆ ಹಂತ ಹಂತವಾಗಿ ಸಾಧನೆ ಮಾಡುತ್ತ, ಚಿತ್ತವೃತ್ತಿ ನಿರೋಧವನ್ನು ಸಾಧಿಸಿಅಂದರೆ ಮನಸ್ಸಿನಲ್ಲಿರುವ ಅಲೆಗಳನ್ನು ವಿವಿಧ ಯೋಗಾಭ್ಯಾಸಗಳಿಂದ ನಿಯಂತ್ರಿಸಿ, ಸ್ತಬ್ಧೀಕರಿಸಿ, ಮತ್ತು ಕ್ಲೇಶ ಸಂಸ್ಕಾರಗಳನ್ನು ಶಮನಗೊಳಿಸಿ ಯೋಗಿ ಸಮಾಧಿ ಸ್ಥಿತಿಯನ್ನು ಅನುಭವಿಸುತ್ತಾನೆ

ಅಷ್ಟಾಂಗ ಮಾರ್ಗದ ಎಂಟು ಅಂಗಗಳು:

ಯಮನಿಯಮಾಸನ ಪ್ರಾಣಾಯಾಮಪ್ರತ್ಯಾಹಾರಧಾರಣಧ್ಯಾನ ಸಮಾಧಯೋಖಷ್ಟಾವಂಗಾನಿ| (ಪಾತಂಜಲ ಯೋಗಸೂತ್ರ, 2.39)

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮತ್ತು ಸಮಾಧಿ ಇವು ಅಷ್ಟಾಂಗಗಳು. ಅಷ್ಟಾಂಗ ಮಾರ್ಗದ ಮೊದಲನೆಯ ಸಾಧನಾ ಕ್ರಮದ ಬಾಹ್ಯ ಮತ್ತು ಆಂತರಿಕ ಜೀವನದ ಮೌಲ್ಯಗಳ ಅಭ್ಯಾಸ ಮಾಡಲು ಪಾಲಿಸಬೇಕಾದ ಶಿಸ್ತೆಂದರೆ ಯಮ ಮತ್ತು ನಿಯಮಗಳಾಗಿವೆ. ಇವು ಆಧ್ಯಾತ್ಮಿಕ ಜೀವನಕ್ಕೆ ಸೂಕ್ತ ತಳಹದಿ ಕೊಡುತ್ತವೆ. ಇವು ವಿಶ್ವಮಾನ್ಯವೂ ಸಾರ್ವತ್ರಿಕವೂ ಆದ ನೈತಿಕ ಆಚಾರ ಸಂಹಿತೆ ; ಇವುಗಳ ಆಧಾರದಿಂದ ಮಾತ್ರವೇ ಯೋಗದ ಸೌಧವನ್ನು ಸುಭದ್ರವಾಗಿ ನಿರ್ವಿುಸಬಹುದು.

 ಅಹಿಂಸಾಸತ್ಯಾಸ್ತೇಯಬ್ರಹ್ಮಚರ್ಯಾಪರಿಗ್ರಹಾ ಯಮಾಃ |

(ಪಾತಂಜಲ ಯೋಗಸೂತ್ರ, 2.30)

ಅಹಿಂಸೆ, ಸತ್ಯ, ಅಸ್ತೇಯ ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವುಗಳು ಯಮ ಎನಿಸುತ್ತವೆ. ಯಮ ಎಂಬುದು ಸಾಧಕನು ನಿತ್ಯಜೀವನದಲ್ಲಿ ಅನುಸರಿಸಬೇಕಾದ ಬಾಹ್ಯ ನಿಯಮಗಳು.

ಅಹಿಂಸೆ: ಇಲ್ಲಿ ಅಹಿಂಸೆ ಎಂದರೆ ಇತರ ಜೀವರಾಶಿಗಳಿಗೆ, ನಮ್ಮೊಂದಿಗೆ ಸಹಬಾಳ್ವೆ ನಡೆಸುತ್ತಿರುವ ವ್ಯಕ್ತಿಗಳಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಾನಿ ಉಂಟು ಮಾಡದೇ ಇರುವುದು. ಅಹಿಂಸೆ ಪ್ರತಿಷ್ಠಿತನಾದವನ ಸನ್ನಿಧಿಯಲ್ಲಿ ಹಿಂಸಾಪ್ರವೃತ್ತಿಯ ಪ್ರಾಣಿಗಳು ಮತ್ತು ಕ್ರೂರ ವ್ಯಕ್ತಿಗಳು ಕೂಡ ವೈರತ್ಯಾಗವನ್ನು ಮಾಡಿ ಶಾಂತಿಯನ್ನು ಅನುಭವಿಸುತ್ತವೆಬುದ್ಧದೇವನ ಸನ್ನಿಧಿಯಲ್ಲಿ ಕ್ರೂರಿಯಾದ ಅಂಗುಲಿಮಾಲನು ಪರಿವರ್ತನೆಗೊಂಡಂತೆ. ಸ್ವಾಮಿ ವಿವೇಕಾನಂದರ ಸಾನ್ನಿಧ್ಯದಲ್ಲಿ ಒಮ್ಮೆ ಒಂದು ಹುಲಿ ಶಾಂತಗೊಂಡಂತೆ.

ಅಹಿಂಸಾಪ್ರತಿಷ್ಠಾಯಾಂ ತತ್ಸನಿಧೌ ವೈರಾತ್ಯಾಗಃ | (ಪಾ., 2.35)

ಸತ್ಯ: ಮನಸ್ಸು ಮತ್ತು ವಚನದಲ್ಲಿ ಯಥಾರ್ಥತೆಯೇ ಸತ್ಯ. ಸತ್ಯವನ್ನೇ ಹೇಳುವುದರಲ್ಲಿ ನಿರತನಾಗಿದ್ದವನ ಪ್ರತಿಯೊಂದು ಸಾಧನಾಕ್ರಿಯೆಯೂ ಪರಿಣಾಮಕಾರಿಯಾಗುವುದು ಮತ್ತು ಅವನನ್ನು ಪರಿವರ್ತನೆಗೊಳಿಸುವುದು. ಸತ್ಯಸ್ವರೂಪವಾದ ಚೈತನ್ಯದ ಅನುಭೂತಿಯ ಪಥದಲ್ಲಿ ಸಾಧಕನು ಬಹುಬೇಗ ಮುಂದುವರಿಯುತ್ತಾನೆ. ಅವನ ಸತ್ಕರ್ಮಗಳು ಶೀಘ್ರ ಫಲಪ್ರದವಾಗಿ ಅವನನ್ನು ರಕ್ಷಿಸುತ್ತವೆ.

ಸತ್ಯಪ್ರತಿಷ್ಠಾಯಾ ಕ್ರಿಯಾಲಾಶ್ರಯತ್ವಮ್ ಅಸ್ತೇಯಃ | (ಪಾ., 2.36)

ಅಸ್ತೇಯ: ಅಸ್ತೇಯವೆಂದರೆ ಇತರರ ವಸ್ತುಗಳನ್ನು ಬಯಸದೆ ಹಾಗೂ ಅವಲಂಬಿಸದೆ, ತನ್ನಿಂದ ತಾನೇ ನ್ಯಾಯಸಮ್ಮತವಾಗಿ ಸಹಜವಾಗಿ ಒದಗಿಬಂದ ವಸ್ತುಗಳಲ್ಲಿ ಸಂತೃಪ್ತನಾಗಿರಬೇಕು. ಅಸ್ತೇಯದಲ್ಲಿ ನೆಲೆ ನಿಂತ ಯೋಗಿಗೆ ಶ್ರೇಷ್ಠವಾದ ವಸ್ತುಗಳು ದೊರಕುತ್ತವೆ.

 ಬ್ರಹ್ಮಚರ್ಯ ಪ್ರತಿಷ್ಠಾಯಾಂ ವೀರ್ಯಲಾಭಃ | (ಪಾ., 2.38)

ಬ್ರಹ್ಮಚರ್ಯದಲ್ಲಿ ಅವನು ಪ್ರತಿಷ್ಠಿತನಾದ ಮೇಲೆ ಅವನಿಗೆ ವೀರ್ಯಶಕ್ತಿಯ ಲಾಭವಾಗುತ್ತದೆ. ಇಂದ್ರಿಯ ನಿಗ್ರಹಕ್ಕೆ ಬ್ರಹ್ಮಚರ್ಯವೇ ಆಧಾರ. ಇದು ಅಂತಃಶಕ್ತಿ ಮತ್ತು ಸದ್ಗುಣಗಳಿಂದ ಕೂಡಿದ ಬುದ್ಧಿಬಲವನ್ನು ವರ್ಧಿಸುತ್ತದೆ. ಬ್ರಹ್ಮಚರ್ಯವೂ ಸ್ಮೃತಿಶಕ್ತಿಯನ್ನು ಕೂಡ ತೀಕ್ಷ್ಣವಾಗಿಸುತ್ತದೆ. ತನ್ಮೂಲಕ ಜ್ಞಾನವನ್ನು ಸ್ಮೃತಿಯಲ್ಲಿ ಧರಿಸಿ ಅದರಂತೆ ಅಭ್ಯಾಸ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸುತ್ತದೆ. ಸ್ವಾಮಿ ವಿವೇಕಾನಂದರು, ಸಂತ ರಾಮತೀರ್ಥರು ಮೊದಲಾದ ನೂರಾರು ಸಂತಶ್ರೇಷ್ಠರು ಜೀವನ ಮತ್ತು ಸಂದೇಶದಿಂದ, ಬ್ರಹ್ಮಚರ್ಯದ ಪಾಲನೆಯಿಂದ ಹೀಗೆ ಅಸಾಧಾರಣ ಮೇಧಾಶಕ್ತಿ ಮತ್ತು ಸ್ಮೃತಿಶಕ್ತಿ ಉತ್ಪನ್ನವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಪರಿಗ್ರಹ

ಅಪರಿಗ್ರಹಸ್ಥೆ ೖರ್ಯು ಜನ್ಮಕಥಂತಾಸಂಬೋಧಃ | (ಪಾ., 2-39)

ಅಪರಿಗ್ರಹವೆಂದರೆ ಇನ್ನೊಬ್ಬರಿಂದ ವಸ್ತುಗಳನ್ನು ಸ್ವೀಕರಿಸದೇ ಇರುವುದು ಮತ್ತು ಮಾನಸಿಕವಾಗಿ ಇತರರ ವಸ್ತುಗಳನ್ನು ಬಯಸದೆ ಇರುವುದು. ಗುಣದಲ್ಲಿ ನೆಲೆನಿಂತವನಿಗೆ ಅವನ ಪೂರ್ವಜನ್ಮದ ಜ್ಞಾನ ಉಂಟಾಗುವುದು. ಮಾತ್ರವಲ್ಲ, ಪುನರ್ಜನ್ಮವು ಯಾವ ಕಾರಣದಿಂದ ಪ್ರಾಪ್ತವಾಯಿತು ಎಂಬ ತಿಳಿವಳಿಕೆ ಉಂಟಾಗಿ ಮುಂದಿನ ಜನ್ಮದಿಂದ ಮುಕ್ತನಾಗಲು ಬೇಕಾದ ಮುಕ್ತಿಸಾಧನ ಮಾರ್ಗ ಸ್ಪಷ್ಟವಾಗುವುದು. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲು ಬೇಕಾದ ಸ್ಪಷ್ಟ ವಿವೇಕವು ಸಾಧಕನಿಗೆ ದೊರಕುವುದು. ಆದುದರಿಂದ ಸಾಧಕನು ಪರಾವಲಂಬನೆಯಿಂದ ಮುಕ್ತನಾಗಬೇಕು. ಸಾಧ್ಯವಾದ ಮಟ್ಟಿಗೆ ಸ್ವತಂತ್ರವಾಗಿ ಜೀವನ ನಡೆಸಬೇಕು. ಅಪರಿಗ್ರಹದಲ್ಲಿ ಅವನು ಪ್ರತಿಷ್ಠಿತನಾದ ಮೇಲೆ ಅವನ ಜನ್ಮಗಳು ಏಕೆ, ಯಾವ ಕಾರಣದಿಂದ ಎಂಬ ಜ್ಞಾನವು ಅವನಿಗೆ ಬರುತ್ತದೆ. ಹೀಗೆ ಕ್ಲಿಷ್ಟವಿಲ್ಲದ, ಆಧ್ಯಾತ್ಮಿಕ ಔನ್ನತ್ಯದೆಡೆಗೆ ಸಾಗಲು ಅನುವಾಗುವ ಪಥವನ್ನು ಪಾತಂಜಲಿ ಯೋಗಸೂತ್ರ ದಯಪಾಲಿಸಿದ್ದು, ಅದು ಭಾರತದ ದೊಡ್ಡ ಸಾಂಸ್ಕೃತಿಕಆಧ್ಯಾತ್ಮಿಕ ಆಸ್ತಿ. ಆಸ್ತಿಯನ್ನು ಸಂರಕ್ಷಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜೊತೆಯಲ್ಲಿ ನಿತ್ಯನಿರಂತರ ಸಾಧನಾ ಪಥದ ಮಾರ್ಗವಾದ ಯೋಗ ನಮ್ಮೆಲ್ಲರ ಉಸಿರಾಗಲಿ.

Feature Image Credit: dreamstime.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.