close logo

ಸೃಷ್ಟಿ-ಸ್ಥಿತಿ-ಲಯ – ಭಾಗ ೬: ಧರ್ಮ ಮತ್ತು ಮೋಕ್ಷ

ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.

ಸೃಷ್ಟಿ-ಸ್ಥಿತಿ-ಲಯ-ದ ವಿಶಾಲ-ಭಿತ್ತಿಯಲ್ಲಿ ಧರ್ಮ ಎಂದರೇನು?

ಹೀಗೆ, ಸೃಷ್ಟಿ-ಸ್ಥಿತಿ-ಲಯ-ದ ವಿಶಾಲ-ಭಿತ್ತಿಯಲ್ಲಿ ಧರ್ಮವು ನಂತರ ಋತಕ್ಕೆ ಅನುಗುಣವಾಗಿ ಸ್ಥಿತಿಯನ್ನು ಕಾಪಾಡಿಕೊಳ್ಳುವ ಕರ್ಮ-ಸಮುಚ್ಚಯ-ವಾಗುತ್ತದೆ. ಅರ್ಥಾತ್ 

  • ಋತದ ಮಾರ್ಗದಲ್ಲಿ ಬ್ರಹ್ಮಾಂಡದ ಬದಲಾವಣೆಯನ್ನು ನಡೆಸುತ್ತ ಮತ್ತು ತನ್ಮೂಲಕ ಬ್ರಹ್ಮಾಂಡವನ್ನು ಸ್ಥಿತಿಯಲ್ಲೇ ಇರಿಸುವ ಸೃಷ್ಟಿಯ ಯಾವುದೇ  ಕಾರ್ಯ ಧರ್ಮವೇ  ಆಗುತ್ತದೆ.   
  • ಮನುಷ್ಯನ ಯಾವುದೇ ಒಳ್ಳೆಯ ಕಾರ್ಯ ಸಹಜವಾಗಿಯೇ ಧರ್ಮವಾಗುತ್ತವೆ.
  • ಅಷ್ಟೇ ಅಲ್ಲದೆ, ಬ್ರಹ್ಮಾಂಡವನ್ನು ಸ್ಥಿತಿಯಲ್ಲಿಯೇ ಇರಿಸುವುದಕ್ಕೆ ಲಯ ಕೈಗೊಳ್ಳುವ ಯಾವುದೇ ಕಠಿಣ ಕ್ರಮ – ಅದೆಷ್ಟೇ ನಾಶವನ್ನುಂಟು ಮಾಡಿದರೂ – ಅದೂ ಧರ್ಮವಾಗುತ್ತದೆ. (ಕುರುಕ್ಷೇತ್ರ ಯುದ್ಧ ಅಂತಹ ಒಂದು ಉದಾಹರಣೆಯಾಗಿದೆ)

ಧರ್ಮದ ಈ ಬಗೆಯ ವಿಶಾಲ-ವ್ಯಾಖ್ಯಾನ ಅದನ್ನು ಕಾನೂನಿನ ಮಿತಿಯಾದ ದೃಷ್ಟಿಕೋನದಿಂದ ಬಿಡುಗಡೆಗೊಳಿಸುತ್ತದೆ.  ಬದಲಾಗಿ ಸೃಷ್ಟಿಯ ಪರಿಮಿತಿಯ, ಬ್ರಹ್ಮಾಂಡದ ರೀತಿ-ನೀತಿಯ ಅನ್ವೇಷಣೆಯನ್ನಾಗಿ ಮಾರ್ಪಡಿಸುತ್ತದೆ.  ಆಧುನಿಕರಿಗೆ ಇದು ಮಾರ್ಪಾಡು. ಪ್ರಾಚೀನರಿಗೆ ಇದುವೇ ಸಹಜ-ರೀತಿ. ನಮ್ಮ ಯಾವುದೇ ಕಾರ್ಯ ಆ ಕಾಲದ ಸ್ಥಿತಿಯ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಮೇಲೆ ಅದರ ಧಾರ್ಮಿಕ ಮೌಲ್ಯ ತೀರ್ಮಾನವಾಗುತ್ತದೆ. ಆದ್ದರಿಂದ, ಯಾವುದೇ ಕಾರ್ಯದ ಧಾರ್ಮಿಕ ಆ ದಿನದ, ಅರ್ಥಾತ್ ಪ್ರಸ್ತುತ ಕಾಲದ, ಭಿತ್ತಿಯಲ್ಲಿಯೇ ತೀರ್ಮಾನವಾಗಬೇಕಾದ ವಿಷಯವಾಗುತ್ತದೆ. ಆ ದಿನ ನಮ್ಮ ಮುಂದೆ ಲಭ್ಯವಿರುವ ನೈಸರ್ಗಿಕ ಹರಿವಿನ ಮಾರ್ಗಗಳಲ್ಲಿ ಒಂದನ್ನು ಆಯ್ದುಕೊಳ್ಳುವ ಕಾರ್ಯವಾದರೆ ಅದು ಧರ್ಮ. 

ಆದ್ದರಿಂದ, ಧರ್ಮವನ್ನು ಎಂದೂ ಬದಲಾಗದ ಇಂತಿಷ್ಟೇ ನಿಯಮಗಳಿಗೆ ಇಳಿಸಲಾಗುವುದಿಲ್ಲ. ಧರ್ಮವು ಸಾರ್ವಕಾಲಿಕ ಸತ್ಯವಾದ  ತತ್ವಗಳನ್ನಾಧರಿಸಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈ ತತ್ವಗಳು ಕಾನೂನಲ್ಲ. ಈ ತತ್ವಗಳು ದೇಶ-ಕಾಲ-ವರ್ತಮಾನಕ್ಕೆ ಅನುಗುಣವಾಗಿ ಬೇರೆ ಬೇರೆ ವಾಸ್ತವವನ್ನು ಪಡೆಯುತ್ತದೆ. ಒಂದೇ ಕಾರ್ಯ ಬೇರೆ-ಬೇರೆ ಸಂಭವನೀಯ ಫಲಿತಾಂಶವಾಗಿ ಮಾರ್ಪಾಡಾಗುತ್ತದೆ. ಇದೇ ಕಾರಣಕ್ಕೆ ಭಾರತವು ಎಲ್ಲ ಕಾಲಕ್ಕೂ ಒಂದೇ ಕಾನೂನು ಪುಸ್ತಕವನ್ನು ಹೊಂದಿಲ್ಲ ಎಂಬ ವಾಸ್ತವವನ್ನು ಇದು ವಿವರಿಸುತ್ತದೆ. ಭಾರತವು ಇತಿಹಾಸದ ಯಾವುದೇ ಸಮಯದಲ್ಲಿ ಒಂದೇ ಕಾನೂನು ಪುಸ್ತಕವನ್ನು ಅವಲಂಬಿಸಿಲ್ಲ. ಭಾರತವು ಯಾವಾಗಲೂ ವಿಕಸನಗೊಳ್ಳುತ್ತಿರುವ ಪದ್ಧತಿಗಳು ಮತ್ತು ಸಂಪ್ರದಾಯಗಳ ಮೇಲೆ ಅವಲಂಬಿತವಾಗಿದೆ – ಪ್ರತಿಯೊಂದು ಸಮುದಾಯ ತನ್ನದೇ ಕಾನೂನನ್ನು ತನ್ನದೇ ಲಿಖಿತ-ಅಲಿಖಿತ ರೀತಿಯಲ್ಲಿ ರೂಪಿಸಿಕೊಂಡಿದೆ. ಆದರೆ ಮಹಾಕಾವ್ಯಗಳನ್ನು ಮಾತ್ರ ನಾವು ಶಾಶ್ವತವೆಂಬಂತೆ  ನೋಡಿದ್ದೇವೆ. ಬರೆದಷ್ಟೂ ಕಾನೂನು ಪುಸ್ತಕಗಳನ್ನು ನಿರಂತರವಾಗಿ ತಿದ್ದಿದ್ದೇವೆ. ಕಾನೂನಲ್ಲದ ಸ್ಮೃತಿಗಳೇ – ನಮಗೆ 40ರಷ್ಟಿದೆ. ಅವುಗಳಲ್ಲಿ ಯಾವುದಾದರೂ ಒಂದು ಯಾವುದೇ ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾನೂನಿನಂತೆ ಜಾರಿಯಾದದ್ದರ ಉದಾಹರಣೆಯಿಲ್ಲ. ಆದರೆ ಅವೆಲ್ಲಾ ಸ್ಮೃತಿಗಳಿಗೂ ಎಲ್ಲೆಡೆ ಸಾರ್ವಕಾಲಿಕವಾದ ಗೌರವವಿದೆ.  ನಮ್ಮೀ ಬಗೆಯ ವಿಚಾರ-ಸ್ವಾತಂತ್ರ್ಯ ೧೯೫೦ರಲ್ಲಿ ಹೊಸ ಸಂವಿಧಾನವನ್ನು ಹೆಚ್ಚು ಸಡಗರವಿಲ್ಲದೆ ಅಂಗೀಕೃತವಾದದ್ದು ಹೇಗೆ ಎನ್ನುವುದನ್ನು ವಿವರಿಸುತ್ತದೆ. ಭಾರತೀಯ ಸಂಸ್ಕೃತಿ ಸಾರ್ವತ್ರಿಕ ಕಾನೂನುಗಳನ್ನು ಹೆಚ್ಚಾಗಿ ತಿರಸ್ಕರಿಸುತ್ತದೆ.    ಆದರೆ ಸಾರ್ವತ್ರಿಕ, ಸಾರ್ವಕಾಲಿಕ ತತ್ವಗಳನ್ನು ಮಾತ್ರ ಸದಾ ಪರಿಶೋಧಿಸುತ್ತದೆ, ಪೂಜಿಸುತ್ತದೆ.

ಕಡೆಯದಾಗಿ ಮತ್ತೊಮ್ಮೆ ‘ಮೋಕ್ಷ’ ಎಂದರೇನು?

ಮೋಕ್ಷವು ವಿಮೋಚನೆಗೊಂಡ ಮನಸ್ಸಿನ ಸ್ಥಿತಿ.  ಮೋಕ್ಷದ ಮನಸ್ಸಿನ ಸ್ಥಿತಿಯಲ್ಲಿ ಮನುಷ್ಯ ಸಕಲ ಧಾರ್ಮಿಕ ಕ್ರಿಯೆಗಳನ್ನು ನಿರ್ವಹಿಸುತ್ತಾ ನಡೆದರೂ ಆ ಕ್ರಿಯೆಗಳ ಫಲಿತಾಂಶ-ಪರಿಣಾಮಗಳಿಂದ ಪ್ರಭಾವಿತರಾಗದೇ ಇರುತ್ತಾನೆ. ಈ ಸ್ಥಿತಿಯಲ್ಲಿ, ಮನುಷ್ಯ ಪ್ರಪಂಚದ ಪ್ರತಿಯೊಂದು ವಸ್ತುವಿನಿಂದಲೂ ಸಮಾನ ಧಾರ್ಮಿಕ-ದೂರದಲ್ಲಿರುತ್ತಾನೆ. ಎಲ್ಲವೂ ಮುಖ್ಯ ಆದರೆ ಯಾವುದೂ ಮುಖ್ಯವಲ್ಲ ಎನ್ನುವಂತಹ ಸ್ಥಿತಿಯದು. ಪ್ರತಿಯೊಂದು ಆ ಮನುಷ್ಯನಿಗೆ ಸೇರಿದ್ದಾದರೂ, ಯಾವುದೇ ವಸ್ತು ಆ ವ್ಯಕ್ತಿಗೆ ಸೇರಿದ್ದಲ್ಲದೆ ಇರುವುದು ಹೌದು. ಆ ಸ್ಥಿತಿಯಲ್ಲಿ ವ್ಯಕ್ತಿಯ ಯಾವುದೇ ಕಾರ್ಯ ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ. ಆ ಸ್ಥಿತಿಯನ್ನು ತಲುಪಿದ ಮನುಷ್ಯ, ಯಾವುದರಲ್ಲೂ  ತೊಡಗಿಸಿಕೊಳ್ಳದೆ ದೂರದಿಂದಲೇ ಎಲ್ಲವನ್ನೂ ಪರಿಪೂರ್ಣವಾಗಿ ಗ್ರಹಿಸುವ ಸಾಮರ್ಥ್ಯವನ್ನು ಗಳಿಸುತ್ತಾನೆ. ಭಾರತೀಯ ಸಂಸ್ಕೃತಿ ಜೀವನದಲ್ಲಿ ಈ ವಿಶಿಷ್ಟವಾದ ಮಾರ್ಗ ಶೋಧಿಸಿ ಮತ್ತು ಆ ಪ್ರಯಾಣವಾಗಿದ್ದು ಸಾಧ್ಯವಾಗಿಸಿದೆ. ಇದು ನಮ್ಮೆಲ್ಲರ ಮುಂದೆ ಇದೆಯಾದರೂ, ಕೆಲವರು ಮಾತ್ರವೇ ಗುರುತಿಸುವಂತಹದ್ದಾಗಿದೆ. ಕೆಲವೇ ಕೆಲವರು ಅನುಸರಿಸಬಹುದಾಗಿದೆ. ಆದರೆ ಒಂದು ಕಾಲದಲ್ಲಿ ಸಕಲಭಾರತೀಯರಿಗೂ ಈ ಮಾರ್ಗದ ಮೇಲೆ ಶ್ರದ್ದೆಯಿತ್ತು. ಆದರೆ ಆಧುನಿಕ ಶಿಕ್ಷಣದ ಪರಿಣಾಮವಾಗಿ ಈಗ ಸಾಮಾನ್ಯರಿಗೆ ಇದರ ಮೇಲಿನ ಶ್ರದ್ಧೆ ಮೂಡುವುದು ಕಠಿಣವಾಗುವ ಕಾಲ ಬಂದಿದೆ. 

ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವಿದೆ. ಜೀವಂತವಾಗಿರುವಾಗ ಮುಕ್ತಿಯನ್ನು ಸಾಧಿಸಬಹುದಾಗಿದೆ – “ಜೀವನ್ಮುಕ್ತ” ಎಂಬ ಪದ ಅದನ್ನು ತೋರಿಸುತ್ತದೆ. ಭಾರತದ ಅನೇಕ ಋಷಿಗಳು, ಬುದ್ಧ ಮತ್ತು ನಮ್ಮ ಕಾಲದ ಪರಮಹಂಸರು ಆ ಸ್ಥಿತಿಯನ್ನು ಸಾಧಿಸಿದರು. ಒಬ್ಬ ವ್ಯಕ್ತಿಯು ಮರಣದ ನಂತರ ಇದನ್ನು ಸಾಧಿಸಿದ್ದಾನೆ ಎಂದರೆ ಅದಕ್ಕೂ ಒಂದು ಅರ್ಥವಿದೆ. ಈ ಪ್ರಬಂಧದ ಮಿತಿಯಲ್ಲಿ ಹೇಳುವುದಾದರೆ, ಧಾರ್ಮಿಕವಾಗಿ ಬದುಕಿ ಮುಕ್ತಿಮಾರ್ಗವನ್ನು ಸೃಷ್ಟಿಸಿಯೋ ರಕ್ಷಿಸಿಯೂ ಮರಣವನ್ನಪ್ಪುವ ಎಲ್ಲರೂ ಮರಣಾನಂತರ ಮುಕ್ತಿಗೆ ಪಾತ್ರರಾಗುತ್ತಾರೆ ಎನ್ನಬಹುದು. 

ಇಲ್ಲಿಯವರೆಗೆ – ನಾವು ಮುಕ್ತಿ/ಮೋಕ್ಷವನ್ನು ಪರಿಕಲ್ಪನೆಯಾಗಿ ಮಾತ್ರವಲ್ಲದೆ ಪರಮಸತ್ಯವಾದ, ಸಾಧಿಸಬಹುದಾದ ವಸ್ತುವಾಗಿ ಚರ್ಚಿಸಿದ್ದೇವೆ. ಆದರೆ, ಪ್ರಾಯೋಗಿಕವಾಗಿ, ಅದನ್ನು ಸಾಧಿಸಬಹುದಾದರೂ ಹೇಗೆ? ಆಳವಾದ ಪಾಂಡಿತ್ಯದ ಅಗತ್ಯವು ಕಡ್ಡಾಯವಾಗಿದೆಯೇ? ಒಬ್ಬ ಬೌದ್ಧಿಕ ಅಥವಾ ಕಠಿಣ ತಪಸ್ವಿಯ ರೀತಿಯ ಜೀವನದಲ್ಲಿ ತೊಡಗಿಸಿಕೊಳ್ಳಬೇಕೇ? ಈ ವಿಷಯದಲ್ಲಿ ಭಾರತೀಯ ಸಂಪ್ರದಾಯ ವಿಸ್ಮಯಕಾರಿಯಾಗಿ ತೆರೆದುಕೊಂಡಿದೆ. ತಾತ್ವಿಕವಾಗಿ ಹೇಳುವುದಾದರೆ, ಮನುಷ್ಯ ಮೋಕ್ಷವನ್ನು ಯಾವ ರೀತಿಯಲ್ಲಿ ಬೇಕಾದರೂ ಪಡೆಯಬಹುದು. ಉದಾಹರಣೆಗೆ, ಫುಟ್ಬಾಲ್ ಆಟಗಾರನೊಬ್ಬ  ಆಡುತ್ತಿರುವಾಗಲೇ  ಇದನ್ನು ಸಾಧಿಸಬಹುದು. ಹೆಚ್ಚು ಭೌತಿಕವಾದ ವ್ಯಕ್ತಿಯು ಈ ಹಾದಿಯಲ್ಲಿ ಇದ್ದಕ್ಕಿದ್ದಂತೆ ಮುಗ್ಗರಿಸಬಹುದು. ಒಬ್ಬ ಸಾಮಾನ್ಯ ಪುರುಷ/ಮಹಿಳೆ ತನ್ನ ದಿನನಿತ್ಯದ ಜೀವನದಲ್ಲಿ ಈ ಮಾರ್ಗವನ್ನು ಕಂಡುಕೊಳ್ಳಬಹುದು. ಆದರೆ ಇದು ಇಷ್ಟು ಸುಲಭವೂ ಅಲ್ಲ. ಈ ಜೀವನ ರೀತಿಯಲ್ಲಿ ಸಾಧ್ಯವಿದ್ದರೂ ಒಂದು ನಿರ್ದಿಷ್ಟ ಸಾಧನಾ ಕ್ರಮವಿಲ್ಲದೆ ಸಾಧ್ಯವಿಲ್ಲ.  ಒಂದೇ ಜನ್ಮದಲ್ಲಿ ಆಗುವುದೂ ಇಲ್ಲ. 

ಸಹಜವಾಗಿ, ಭಾರತೀಯ ಸಂಸ್ಕೃತಿ ಸಾಂಪ್ರದಾಯಿಕವಾಗಿ ಈ ಮಾರ್ಗವನ್ನು ತಲುಪಲು ಹಲವಾರು ತಂತ್ರಗಳನ್ನು ರಚಿಸಿದೆ. ಎಲ್ಲವು ಯೋಗದಿಂದ ನಿರ್ದೇಶಿತವಾಗಿದ್ದರೂ ಕೆಲವು ಮಾರ್ಗಗಳು ಯೋಗದ ಉನ್ನತ ಸ್ವಭಾವವನ್ನು ಹೊಂದಿವೆ. ಕೆಲವರಾದರೂ ತಮ್ಮ ಜೀವಿತಾವಧಿಯಲ್ಲಿ ಸಾಧಿಸಬಹುದಾದ ಸ್ಥಿತಿಯಾಗಿದೆ. ಆದರೆ ಈ ಮಾರ್ಗದಲ್ಲಿ ನಡೆಯಲಿಚ್ಛಿಸುವ ಎಲ್ಲರಿಗೂ ತಮ್ಮ ಹಿನ್ನೆಲೆಯನ್ನು ಮಿತಿಯಿಲ್ಲದೆ ಮಾರ್ಗಗಳು ಲಭ್ಯವಿದೆ. ಮುಕ್ತಿಮಾರ್ಗದಲ್ಲಿ ನಡೆಯುವುದಕ್ಕೆ ಮಾತ್ರ ಭಾರತೀಯ ಸಂಸ್ಕೃತಿಯಲ್ಲಿ ಸಮಾನ ಅವಕಾಶವಿದೆ. ಒಬ್ಬ ಅಪರಾಧಿ, ರಾಜ, ಉದ್ಯಮಿ ಅಥವಾ ರೈತ ಅಥವಾ ಸಾಮಾಜಿಕವಾಗಿ ಕೆಳಸ್ತರ ಎಂದೆನ್ನಿಸುವ ಯಾವುದೇ ಮನುಷ್ಯನಿಗೂ ಮೋಕ್ಷದ ಸ್ಥಿತಿಯನ್ನು ಸಾಧಿಸಲು ತಾತ್ವಿಕವಾಗಿ ಸಮಾನ ಅವಕಾಶವಿದೆ.

ಮೋಕ್ಷದ ಈ ಸ್ಥಿತಿಯ ಸಾಧನೆಯ ಮೇಲಿನ ಈ ದೃಢವಾದ ನಂಬಿಕೆ, ಅದರ ಸಾಧನೆಯ ಎಲ್ಲ ಹಾದಿಗಳಲ್ಲಿ  ಜೀವನ ಸೌಂದರ್ಯದ ಅನುಭವ – ಇದುವೇ ಭಾರತೀಯ ಸಂಸ್ಕೃತಿ. ಭಾರತೀಯ ಪರಂಪರೆಯಲ್ಲಿ ಇಡಿಯ ಸಮಾಜ ಮೋಕ್ಷದ ಕಡೆಗೆ ನಿರ್ದೇಶಿಸಲ್ಪಟ್ಟಿದೆ. ಮೋಕ್ಷವೇ ಭಾರತೀಯ ಸಮಾಜದಲ್ಲಿ ಧರ್ಮ, ಅರ್ಥ, ಕಾಮವನ್ನು ಸುಸ್ಥಿರ ಮತ್ತು ನೈಜವಾಗಿಸುವುದು. ಧರ್ಮವು ಅರ್ಥ, ಕಾಮವನ್ನು ಮಾರ್ಗದರ್ಶಿಸುತ್ತದೆ ಮತ್ತು ಅವುಗಳಿಗೆ ಒಂದು  ಮಿತಿಯನ್ನು ರೂಪಿಸುತ್ತದೆ. ಆ ಮೂಲಕ ಎಲ್ಲವನ್ನೂ ಸುಸ್ಥಿರಗೊಳುತ್ತದೆ. ಸಹಜವಾಗಿಯೇ ಭೌತಿಕ ಪರಿಸರವನ್ನೂ ಸುಸ್ಥಿರಗೊಳಿಸುತ್ತದೆ. ಮನುಷ್ಯನ ಎಲ್ಲ ಸೃಷ್ಟಿ ಮತ್ತು ಲಯಗಳನ್ನು ಸ್ಥಿತಿಯ ದಿಕ್ಕಿನಲ್ಲಿ ನಿರ್ದೇಶಿಸುತ್ತದೆ. 

ಸುಸ್ಥಿರತೆ ಮತ್ತು ಪರಿಸರವಾದವನ್ನು ಅರಿತುಕೊಳ್ಳುವಲ್ಲಿ ಪುರುಷಾರ್ಥಗಳ ಪಾತ್ರ ಹೀಗಿದೆ.

ಸಾರಾಂಶ

ಸ್ಥಿತಿ ಎಂದರೆ ಕ್ರಿಯಾತ್ಮಕ ಸ್ಥಿರ-ಸಮತೋಲನದ ಸ್ಥಿತಿ. ಸ್ಥಿತಿ ತನ್ನದೇ ಸ್ವರೂಪವಾಗಿ ಸೃಷ್ಟಿ ಮತ್ತು ಲಯವಗಳನ್ನು  ಒಳಗೊಂಡಿದೆ. ಈ ತಾತ್ವಿಕ ದೃಷ್ಟಿಕೋನದಲ್ಲಿ, ಬ್ರಹ್ಮಾಂಡವು ನಿರಂತರ ಸೃಜನಶೀಲ ಚಲನೆಯಲ್ಲಿದೆ.  ಈ ಚಲನೆಯನ್ನು ಸಾರ್ವಕಾಲಿಕವಾದ ವಿಶ್ವಾತ್ಮಕ ನಿಯಮಗಳು ನಿಯಂತ್ರಿಸುತ್ತದೆ. ಅವುಗಳನ್ನೇ ನಾವು ಋತ ಎನ್ನುತ್ತೇವೆ. ಮನುಷ್ಯನ ಅರ್ಥ, ಕಾಮವು ಸೃಷ್ಟಿಯನ್ನು ಪ್ರಭಾವಗೊಳಿಸುತ್ತವೆ. ಧರ್ಮವು ಋತದ ದಿಕ್ಕಿನಲ್ಲಿ ಅರ್ಥ-ಕಾಮಗಳನ್ನು ನಿರ್ದೇಶಿಸುತ್ತದೆ. ಮೋಕ್ಷವಿಲ್ಲದೆ ಧರ್ಮವು ಉಳಿಯುವುದಿಲ್ಲ. ಮೋಕ್ಷವನ್ನು ಸಾಧಿಸಲು ಭೌತಿಕ-ಪ್ರಪಂಚದಿಂದ ನಿರ್ಗಮಿಸಬೇಕಾದ ಅಗತ್ಯವಿದೆ. ಆದರೆ ಆ ಮಾರ್ಗದಲ್ಲಿಯೂ ಜೀವನ ಸುಂದರವಾಗಿರುತ್ತದೆ.

ಭಾರತೀಯ ಸಂಸ್ಕೃತಿಯ ಜೀವನದ ಈ ಪರಿಕಲ್ಪನೆಯ ಪರಿಣಾಮಗಳು ಕೆಲವು ಈ ರೀತಿಯಾಗಿರುತ್ತದೆ. 

  • ಪ್ರಗತಿ ಎನ್ನುವುದು ಪ್ರಾಥಮಿಕವಾಗಿ ವ್ಯಕ್ತಿಗೆ ವ್ಯಾಖ್ಯಾನಿಸಲಾಗಿದೆ. ಪ್ರಗತಿ ಎನ್ನುದುದು ಮುಖ್ಯವಾಗಿ ಮೋಕ್ಷ ಹಾದಿಯಲ್ಲಿದೆ. 
  • ಮನುಷ್ಯನ ಅರ್ಥ-ಕಾಮ ಭೌತಿಕ ಪ್ರಪಂಚದ ಬದಲಾವಣೆಗೆ ಕಾರಣವಾಗುತ್ತದೆ. ಅರ್ಥ, ಕಾಮವು ಮೋಕ್ಷಕ್ಕೆ ಅಧೀನವಾಗಿರುವುದರಿಂದ ಭೌತಿ-ಪ್ರಪಂಚದ ಪ್ರಗತಿ ಎನ್ನುವುದು ಮನುಷ್ಯನ ಮೋಕ್ಷಕ್ಕೆ ಅಧೀನವಾಗಿದೆ. ಆದ್ದರಿಂದ ಸುಸ್ಥಿರತೆ/ಪರಿಸರವಾದ ಮುಂತಾದ ಆಧುನಿಕ ತಲ್ಲಣಗಳು ಭಾರತೀಯ-ಜೀವನ ದೃಷ್ಟಿಕೋನದಲ್ಲಿ ಮೂಲಭೂತವಾಗಿಯೇ  ಹಾಸುಹೊಕ್ಕಾಗಿದೆ. ಭಾರತೀಯ ಜೀವನದಲ್ಲಿ ಭೌತಿಕ ವಸ್ತುಗಳ ಅಗತ್ಯವನ್ನು ಮಿತಿಗೊಳಿಸುವ ಪ್ರಕ್ರಿಯೆಗಳು ಕಾಣದೆಯೇ ಜೀವಂತವಾಗಿದೆ.   
  • ಅಧೀನವಲ್ಲದ, ಸಾರ್ವತ್ರಿಕ/ಸಂಪೂರ್ಣ ಪ್ರಗತಿಯನ್ನು ಸಮಾಜಕ್ಕೆ ಅಥವಾ ಭೌತಿಕ-ಪ್ರಪಂಚಕ್ಕೆ ಪ್ರತ್ಯೇಕವಾಗಿ ಭಾರತೀಯ ಸಂಸ್ಕೃತಿ ಅನ್ವಯಿಸುವುದಿಲ್ಲ.  ಭೌತಿಕ ಪ್ರಪಂಚದ ಅಭಿವೃದ್ಧಿ/ಪ್ರಗತಿ ಸಾಪೇಕ್ಷ ಪ್ರಗತಿಯಾಗಿದೆ, ಸ್ವತಂತ್ರ ಮೌಲ್ಯವಲ್ಲ, ಭೌತಿಕ ಪ್ರಪಂಚದ ಅಭಿವೃದ್ಧಿ ಕೇವಲ ನಮ್ಮ ಆಸೆಗಳಿಗೆ, ಮೋಹಕ್ಕೆ, ಭದ್ರತೆಗೆ – ಅರ್ಥ-ಕಾಮಗಳಿಗೆ. ಅಲ್ಲದೆ  ಧರ್ಮ ಮತ್ತು ಮೋಕ್ಷ ಸಾಧನೆಗೆ ಬೇಕಾಗುವಷ್ಟು. ಈ ದೃಷ್ಟಿಕೋನ ಭೌತಿಕ ವಸ್ತುವಿನ ಅಗತ್ಯವನ್ನು ಮಿತಿಗೊಳಿಸುತ್ತದೆ. ಆಧುನಿಕ ಕಳ್ಳನಗಳಾದ ಪರಿಸರವಾದ/ಸುಸ್ಥಿರತೆಗಳು ನಮಗೆ ಸಹಜವಾಗಿ ಲಭ್ಯವಾಗುವುದು ಹೀಗೆ. 

ಭಾರತೀಯ ಸಂಸ್ಕೃತಿಯ ಈ ದೃಷ್ಟಿಕೋನ ನಮ್ಮ ಅನೇಕ ವೈಶಿಷ್ಟ್ಯತೆಗಳಿಗೆ  ಕಾರಣವಾಗಿದೆ. ಸಾಮುದಾಯಿಕ ಜೀವನ, ವೈವಿಧ್ಯತೆ ಹೀಗೆ ಅನೇಕ ಅಂಶಗಳಿಗೆ ಇದುವೇ ಮೂಲ.

Feature Image Credit: twitter.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.