close logo

ಸೃಷ್ಟಿ -ಸ್ಥಿತಿ -ಲಯ ಮಾಲಿಕೆ ಭಾಗ 5: ಮಹಾ ಸಮತೋಲನ

ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.

ವೈದಿಕ ದೃಷ್ಟಿ: ಸೃಷ್ಟಿ, ಸ್ಥಿತಿ ಮತ್ತು ಲಯದ ನಡುವಿನ ಮಹಾ ಸಮತೋಲನ

ಸಮುದ್ರ ಮತ್ತು ದ್ವೀಪಗಳ ಸಾದೃಶ್ಯವನ್ನು ಮತ್ತಿಷ್ಟು ಮುಂದುವರೆಸೋಣ. ಒಂದು ದ್ವೀಪದಿಂದ ಇನ್ನೊಂದಕ್ಕೆ ಹಲವಾರು ಮಾರ್ಗಗಳಿರುತ್ತವೆ. ಕೆಲವು ಮಾರ್ಗಗಳು ಯಾವಾಗಲೂ ಪರಿಪೂರ್ಣವಾದ, ಸುಸ್ಥಿರವಾದ ಮಾರ್ಗಗಳಾಗಿರುತ್ತವೆ – ಕೇವಲ ಹಾಗಿರುವುದಿಲ್ಲ. ಸುಸ್ಥಿರವಾದ ಮಾರ್ಗಗಳನ್ನು ಋತ-ಮಾರ್ಗಗಳು ಎಂದು ಕರೆಯಬಹುದು. ಅಂತಹ ಮಾರ್ಗಗಳನ್ನು ತಮ್ಮ ಒಳಗಣ್ಣಿನಿಂದ ಸಾಕ್ಷಾತ್ಕರಿಸಿಕೊಳ್ಳಬಲ್ಲವರೇ ಋಷಿಗಳು. ಹಾಗಲ್ಲದ ಮಾರ್ಗಗಳ ಬಗ್ಗೆ ಚಿಂತಿಸದೆ ಯಾವಾಗಲೂ ಋತ-ಮಾರ್ಗಗಳಲ್ಲಿ ಇರಬಲ್ಲವರು ಮೋಕ್ಷದ ಸ್ಥಿತಿಯಲ್ಲಿರುತ್ತಾರೆ.

ಈ ದೃಷ್ಟಿಯಿಂದ ಧರ್ಮವೆಂದರೆ ನಮ್ಮನ್ನು ಉತ್ತಮವಾದ/ಪರಿಪೂರ್ಣವಾದ ಋತ-ಮಾರ್ಗಗಳಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುವ ಅನಂತ ಕ್ರಿಯೆಗಳ ಗುಂಪೇ ಹೊರತು ಬೇರೇನೂ ಅಲ್ಲ. ಧರ್ಮದ ಸಂಸ್ಕೃತ ಅರ್ಥವು – ಎತ್ತಿಹಿಡಿಯುವುದು, ಧರಿಸುವುದು – ಎಂದರ್ಥ. ಸಂಸ್ಕೃತದಲ್ಲಿ ಇದು “ಧಾರಯತಿ ಇತಿ ಧರ್ಮ” – ಎಂದಾಗುತ್ತದೆ. ‘ಧಾರಯತಿ’ ಧರಿಸುವುದು, ಬೀಳದಂತೆ ಒಟ್ಟಾಗಿರುಸುವುದು, ಐಡಿಯಾಗಿರುವುದು ಎಂದಾಗುತ್ತದೆ.

ನಮ್ಮೀ ದೃಷ್ಟಿಕೋನದ ಪರಿಣಾಮವೆಂದರೆ – ಈ ವಿಶಾಲವಾದ ವ್ಯಾಖ್ಯಾನದ ಅಡಿಯಲ್ಲಿ, ಒಬ್ಬ ವ್ಯಕ್ತಿಗೆ ಮಾರ್ಗಗಳು ಮತ್ತು ಕ್ರಿಯೆಗಳನ್ನು ಅನ್ವೇಷಿಸಲು ಸಂಪೂರ್ಣ ಸ್ವಾತಂತ್ರ್ಯವಿದೆ. ಏಕೆಂದರೆ ಜೀವನದ ಒಂದು ಬಿಂದುವಿನಿಂದ ಮತ್ತೊಂದಕ್ಕೆ ಸಾಗಲು ಅನೇಕ ಋತ ಮಾರ್ಗಗಳಿವೆ. ಎಲ್ಲವೂ ನಮ್ಮ ಕಣ್ಣಿಗೆ ಕಾಣುವುದು ಕಷ್ಟವೆನ್ನುವುದು ಬೇರೆಯ ಮಾತು. ಆದರೆ ಅವುಗಳು ಇರುವುದಂತೂ ನಿಜ. ಈ ಕಾರಣದಿಂದ ಬೇರೆ ಬೇರೆ ಸಮುದಾಯಗಳಲ್ಲಿ ಬರೆಯ ರೀತಿಯಾದ ಕಾನೂನುಗಳಿರುವುದನ್ನು ಕಾಣುತ್ತೇವೆ. ಇದು ಭಾರತೀಯ ಪರಂಪರೆ ವ್ಯಕ್ತಿಗೆ ನೀಡುವ ಸ್ವಾತಂತ್ರ್ಯವಾಗಿದೆ. ಅದು ಹೆಚ್ಚಿನ ವೇಳೆ ಸಮುದಾಯದ ಮೂಲಕವೇ ವ್ಯಕ್ತಿಗೆ ದಕ್ಕುವುದು. ಏಕೆಂದರೆ ಆ ಮಾರ್ಗ ಕಾಣುವುದು ಋಷಿಗಳಿಗೆ ಮಾತ್ರ. ಇದು ಮೋಕ್ಷದ ತಾತ್ವಿಕತೆ ಧಾರ್ಮ-ಅರ್ಥ-ಕಾಮ ವಾಗಿ ಪರಿವರ್ತನೆಯಾಗುತ್ತದೆ. 

ಈ ಪ್ರಸಕ್ತ ಇನ್ನೊಂದೆರೆಡು ಅಂಶಗಳನ್ನು ಗಮನಿಸಯಬೇಕಾದ ಅವಶ್ಯಕತೆಯಿದೆ. ಮತ್ತೆ ಸಮುದ್ರ-ದ್ವೀಪ ಸಾದೃಶ್ಯವನ್ನು ನೋಡೋಣ.  

  • ಸೃಷ್ಟಿ ಯಾವಾಗಲೂ ಪರಿಪೂರ್ಣ ದೋಣಿಯನ್ನು/ಮಾರ್ಗವನ್ನು  ರಚಿಸುವುದಿಲ್ಲ. ಆದ್ದರಿಂದ, ಲಯ ಯಾವುದು ನಾಶವಾಗಬೇಕೋ ಅದನ್ನು ಕಳೆಯುತ್ತದೆ.
  • ಸೃಷ್ಟಿ ಕಾರ್ಯ ಸದಾ ಪರಿಪೂರ್ಣವಾಗಿರುವುದಿಲ್ಲ. ದೋಣಿ ತಪ್ಪು ದಾರಿಯನ್ನು ಹಿಡಿದೇ ಹಿಡಿಯುತ್ತದೆ. ತಪ್ಪು ದಾರಿಗಳು ಇದ್ದೆ ಇರುತ್ತವೆ. ಮತ್ತೆ ಲಯ ಇದನ್ನು ಸರಿಪಡಿಸುತ್ತದೆ.

ಅರ್ಥಾತ್ – ಸೃಷ್ಟಿಯು ತನ್ನ ಕ್ರಿಯಾಶೀಲತೆಯ ಮೂಲಕ ಬ್ರಹ್ಮಾಂಡದ ಸ್ಥಿರತೆಗೆ ಧಕ್ಕೆ ತರದಂತೆ ನೋಡಿಕೊಳ್ಳುವುದೇ ಲಯ.  ಬ್ರಹ್ಮಾಂಡದಲ್ಲಿ ಹೊಸ ಸೃಷ್ಟಿಗೆ ಅಡ್ಡಿಯಾಗುವ ಎಲ್ಲವನ್ನೂ ಲಯ ಕೊನೆಗೊಳಿಸುತ್ತದೆ. ಏಕೆಂದರೆ ಸ್ಥಿತಿ ಕ್ರಿಯಾತ್ಮಕವಾಗಿದರಿಂದ. ಸೃಷ್ಟಿಯ ವಿಪರೀತದಿಂದ ಸ್ಥಿತಿಯು ಬಹಳವೇ ಅಸ್ಥಿರವಾದಾಗ ಲಯ ದೊಡ್ಡ ಪ್ರಮಾಣದ ವಿನಾಶವನ್ನು ಸೃಷ್ಟಿಸುತ್ತದೆ. ಮತ್ತೆ ಹೊಸ ಸೃಷ್ಟಿಗೆ ದಾರಿ ಮಾಡಿಕೊಡುತ್ತದೆ. ಅರ್ಥಾತ್ ಋತಕ್ಕೆ ವಿರುದ್ಧವಾದ ಏನನ್ನಾದರೂ ಸಹ ಲಯ ಕೊನೆಗೊಳಿಸುತ್ತಾ ಬರುತ್ತದೆ.  ಇದಕ್ಕೆ ಬಹು ದೊಡ್ಡ ಉದಾಹರಣೆ ಮನುಷ್ಯ ನಿರ್ಮಿತ ದುಸ್ಸಾಹಸಗಳಿಂದ ಉಂಟಾಗುವ ಪ್ರಕೃತಿ-ವಿಕೋಪ.

ಆದ್ದರಿಂದ ಭಾರತೀಯ ಪರಂಪರೆಯಲ್ಲಿ ಸ್ಥಿತಿಗೆ ಪ್ರಾಧಾನ್ಯತೆ. ಈ ಸ್ಥಿತಿಯೊಳಗೆ ಸೃಷ್ಟಿ ಮತ್ತು ಲಯ ಅಡಗಿ ಕುಳಿತಿವೆ. ನಮ್ಮ ಸಾಂಸ್ಕೃತಿಕ ದೃಷ್ಟಿಕೋನ ಮತ್ತು ನಾಗರಿಕತೆ ಯಾವ ದಿಕ್ಕಿನಲ್ಲಿ ವಿಕಸನಗೊಂಡಿತು ಎಂಬುದಕ್ಕೆ ಸ್ಥಿತಿಯಲ್ಲಿ ನಮಗೆ ಉತ್ತರ ಸಿಗುತ್ತದೆ. ಸ್ಥಿತಿ ಪರಿಕಲ್ಪನೆಯ ವಿಶೇಷ ತಾತ್ವಿಕ ಪರಿಣಾಮಗಳಿವೆ. ಭಾರತ ಎಂದಿಗೂ (ಭೌತಿಕ) ಪ್ರಗತಿಯ ಪರಿಕಲ್ಪನೆಯನ್ನು ಸ್ವತಂತ್ರ ಮೌಲ್ಯವಾಗಿ ಪರಿಗಣಿಸಿಲ್ಲದಿರುವುದಕ್ಕೆ ಸ್ಥಿತಿಯೇ ಕಾರಣ. ಪ್ರಗತಿ ಬ್ರಹ್ಮಾಂಡದಲ್ಲಿ ಸ್ವತಂತ್ರ ಮೌಲ್ಯ ಅಲ್ಲ. ಸ್ಥಿತಿಯನ್ನು ಮರಳಿ ಪಡೆಯುವುದಕ್ಕೆ ಮಾತ್ರವೇ ಪ್ರಗತಿ ಅಗತ್ಯ. ಅರ್ಥಾತ್ ಬ್ರಮಾಂಡವು ಸರಿಯಾದ ಕ್ರಿಯಾತ್ಮಕ ಸ್ಥಿತಿಗೆ ಬರುವುದಕ್ಕೆ ಪ್ರಗತಿ  ಅವಶ್ಯಕವಾಗಿದೆ . ಪ್ರಗತಿ ಸೃಷ್ಟಿಯ ಭಾಗ ಮತ್ತು  ಅಧೀನ ಮೌಲ್ಯ. ಅಷ್ಟೇ ಅಲ್ಲ ಭೌತಿಕ ಪ್ರಪಂಚದಲ್ಲಿ ಉಂಟಾಗುವ  ಬದಲಾವಣೆಯೆಲ್ಲ ಪ್ರಗತಿಯಲ್ಲ. ಋತಕ್ಕೆ ಹತ್ತಿರವಾದರೆ ಅದು ಪ್ರಗತಿ. ಈ ಕಾರಣದಿಂದಲೇ ಜಿಡಿಪಿ ಮುಂತಾದ ಪರಿಕಲ್ಪನೆಗಳನ್ನು ಪರಿಪೂರ್ಣ ಪ್ರಗತಿಯಾಗಿ ನಾವು ಕಾಣಲಾಗದು. 

ಪರಿಸರವಾದ ಮತ್ತು ಸುಸ್ಥಿರತೆ

ಈ ಎಲ್ಲದರ ಒಟ್ಟು ಫಲಿತಾಂಶವೆಂದರೆ – ಭಾರತವು ಬ್ರಹ್ಮಾಂಡ ಮತ್ತು ಜೀವನವನ್ನು ಒಂದೇ ರೇಖೆಯ  ‘ಡೈನಾಮಿಕ್’ ಗೆ ಎಂದಿಗೂ ಇಳಿಸಿಲ್ಲ. ನಮ್ಮ ದೃಷ್ಟಿಯ ಪ್ರಕಾರ ಪ್ರಪಂಚ ಎಂದಿಗೂ ಉತ್ತಮಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ನಿರಂತರ ಚಲನೆಯಲ್ಲಿರುವ ಈ ಬ್ರಹ್ಮಾಂಡವು ಯಾವಾಗಲೂ ಸ್ಥಿತಿಯಲ್ಲಿರಬೇಕು – ಭಗವಾನ್ ವಿಷ್ಣುವು ಪ್ರತಿನಿಧಿಸುತ್ತಾನೆ. ಅದನ್ನು ಎಂದಿಗೂ ಉತ್ತಮಗೊಳಿಸಬೇಕಾಗಿಲ್ಲವಾದ್ದರಿಂದ, ವಿಶ್ವಕ್ಕೆ ಸಾರ್ವತ್ರಿಕ ಪ್ರಗತಿಯ ಅಗತ್ಯವೇ ಇಲ್ಲ. ಆ ಪರಿಕಲ್ಪನೆಗೆ ಅರ್ಥವೇ ಇಲ್ಲ. ಆದಾಗ್ಯೂ, ಬ್ರಹ್ಮಾಂಡವು ನಿರಂತರವಾಗಿ ಬದಲಾವಣೆ/ಚಲನೆಯಲ್ಲಿದೆ. ಈ ಬದಲಾವಣೆ ಋತಕ್ಕೆ ಅನುಗುಣವಾಗಿ ಸ್ಥಿತಿಯಲ್ಲಿರುವಂತೆ ಎಂದು ಖಚಿತಪಡಿಸಿಕೊಳ್ಳುವುದು ಮನುಕುಲದ ಜವಾಬ್ದಾರಿಯಾಗಿದೆ. ಸೃಷ್ಟಿಯನ್ನು ಗೌರವಿಸಿ, ಸೃಷ್ಟಿಯಲ್ಲಿ ತೊಡಗಿಸಿಕೊಳ್ಳಿ ಆದರೆ ಸೃಷ್ಟಿ-ಕಾರ್ಯ ಋತ ದೊಂದಿಗೆ ಸಂಘರ್ಷದಲ್ಲಿಲ್ಲದಂತೆ ಖಚಿತಪಡಿಸಿಕೊಳ್ಳುವುದು ಅಗತ್ಯ. ಅರ್ಥಾತ್ ಸೃಷ್ಟಿ ಸ್ಥಿತಿಗೆ ಸಹಾಯ ಮಾಡುತ್ತಿದೆ ಎಂದು ಖಚಿತಪಡಿಸಿಕೊಳ್ಳ್ಳುವುದು ಅಗತ್ಯ. 

ಇದೆಲ್ಲದರ ಒಟ್ಟು ಅರ್ಥವೆಂದರೆ ಮನುಕುಲದ ಆಕಾಂಕ್ಷೆ ಸ್ಥಿತಿಯನ್ನು ಸಾಧಿಸುವುದಾಗಿರಬೇಕು. ವೈಯಕ್ತಿಕ ಪ್ರಗತಿಯ ಗುರಿ ಅದಾಗಿರಬೇಕು.  ಈ ಕಾರಣದಿಂದಲೇ ಭಾರತೀಯೆಯ ಪರಂಪರೆ ಭೌತಿಕ ಪ್ರಪಂಚಕ್ಕೆ ಪ್ರಗತಿಯ ಪರಿಕಲ್ಪನೆಯನ್ನು ಲಗಟ್ಟಿಸಿಲ್ಲ, ವ್ಯಕ್ತಿಗೆ ವ್ಯಾಖ್ಯಾನಿಸಲಾಗಿದೆ. ವ್ಯಕ್ತಿಯು ಸ್ಥಿತಿಯ ಸ್ಥಿತಿಯನ್ನು ಸಾಧಿಸಲು ಬಯಸಬೇಕು ಮತ್ತು ಧರ್ಮದ ಪ್ರಕಾರ ವರ್ತಿಸಬೇಕು ಆದ್ದರಿಂದ ಬ್ರಹ್ಮಾಂಡದ ನೈಸರ್ಗಿಕ ಹರಿವು (ಋತ) ಎಂದಿಗೂ ತೊಂದರೆಗೊಳಗಾಗುವುದಿಲ್ಲ. ಬ್ರಹ್ಮಾಂಡವು ಸ್ಥಿತಿಯಲ್ಲಿರುತ್ತದೆ.

ಇದು ಈ ಕೆಳಗಿನ ತೀರ್ಮಾನಗಳಿಗೆ ಕಾರಣವಾಗುತ್ತದೆ. 

  1. ಪ್ರಗತಿಯ ಸಾರ್ವತ್ರಿಕ ಕಲ್ಪನೆಯನ್ನು ಭೌತಿಕ ಜಗತ್ತಿಗೆ ವ್ಯಾಖ್ಯಾನಿಸಲಾಗಿಲ್ಲವಾದ್ದರಿಂದ, ಭಾರತೀಯ ಪರಂಪರೆ ಭೌತಿಕ ಪ್ರಪಂಚವನ್ನು ಕೀಳಾಗಿ ನೋಡಿದೆ ಎಂದು ಅರ್ಥವಲ್ಲ. ಭೌತಿಕ ಜಗತ್ತಿನಲ್ಲಿ ಯಾವುದೇ ಪ್ರಗತಿಯು ಸಾಪೇಕ್ಷ ಪ್ರಗತಿಯಾಗಿದೆ. ಇದು ಪ್ರಾಥಮಿಕವಾಗಿರುವ ವ್ಯಕ್ತಿಯ ಪ್ರಗತಿಗೆ ಕಾರಣವಾಗಬಹುದು ಅಥವಾ ಆಗದೆ ಹೋಗಬಹುದು. ಇದು ಅರ್ಥ ಮತ್ತು ಕಾಮದ ಭಾಗವಾಗಿದೆ. ಪುರುಷಾರ್ಥಗಳು ಕಾಮ ಮತ್ತು ಅರ್ಥವನ್ನು ಒಳಗೊಂಡಿರುತ್ತವೆ, ಭೌತಿಕ ಜಗತ್ತಿನಲ್ಲಿ ನಾವು ಸಾಧಿಸುವ ಪ್ರಗತಿಯನ್ನು ಪ್ರತಿನಿಧಿಸುತ್ತವೆ. ಅರ್ಥ ಕಾಮಗಳೂ ಸಹ ಧರ್ಮ ಮತ್ತು ಮೋಕ್ಷದ ಜೊತೆಯಲ್ಲಿ, ಅದೇ ಮಟ್ಟದಲ್ಲಿ ಪರಿಗಣಿತವಾಗಿವೆ. ಇದರರ್ಥ ನಾವು ವಸ್ತು ಪ್ರಪಂಚವನ್ನು ಮೋಹ, ಬಯಕೆ, ಅರ್ಥ ಮತ್ತು ಭದ್ರತೆ ಎಂದು ನೋಡುತ್ತೇವೆ. ಅದು ನಮಗೆ ಅವಶ್ಯಕ. ಅದನ್ನು ಸಾಧಿಸಲೂ ಬೇಕು. ಆದಾಗ್ಯೂ, ನಮ್ಮ ಅರ್ಥ-ಕಾಮದ ಪೂರೈಕೆ ಸ್ಥಿತಿಯನ್ನು  ಋತದ ಹಾದಿಯಿಂದ ಜಾರಿಸುವುದಿಲ್ಲ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಅದಕ್ಕಾಗಿಯೇ ನಮಗೆ ಧರ್ಮದ ಅವಶ್ಯಕತೆಯಿರುವುದು. ಈ ದೃಷ್ಟಿಕೋನದ ಪರಿಣಾಮವಾಗಿಯೇ, ಭಾರತೀಯ ಪರಂಪರೆಯಲ್ಲಿ  ‘sustainability’ ಎನ್ನುವ ಆಧುನಿಕ ಪರಿಕಲ್ಪನೆಯನ್ನು ಸಹಜವಾಗಿಯೇ, ಪರಿಶ್ರಮವಿಲ್ಲದೆಯೇ ಒಳಗೊಂಡಿರುತ್ತೇವೆ.   
  2. ಧರ್ಮ ಮತ್ತು ಮೋಕ್ಷದ ನಡುವಿನ ಸಂಬಂಧವು ಇದನ್ನು ಹೆಚ್ಚು ದೃಢಗೊಳಿಸುತ್ತದೆ. ಮೋಕ್ಷವನ್ನು ಪಡೆಯುವ ಮಹತ್ವಾಕಾಂಕ್ಷೆಯಿಲ್ಲದೆ ನಾವು ಜೀವನದ (ಧರ್ಮ, ಅರ್ಥ, ಕಾಮ) ಸಮತೋಲಿತ ಅನ್ವೇಷಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೇವಲ ಭೌತಿಕ ಗುರಿಗಳನ್ನು ಬೆನ್ನಟ್ಟುವುದು, ಧಾರ್ಮಿಕ ಮಾರ್ಗದಲ್ಲಿಯೇ ಆದರೂ, ಒಂದು ದಿನ ನಮ್ಮನ್ನು ಧರ್ಮದ ಹಾದಿಯಿಂದ ಜಾರಿಸುತ್ತದೆ.
  3. ಹೀಗಾಗಿ, ಅರ್ಥ ಮತ್ತು ಕಾಮದ ಅಧೀನ ಪುರುಷಾರ್ಥಗಳು. ಸ್ಥಿತಿಯ ಕಾರಣಕ್ಕಾಗಿ ಸೇವೆ ಸಲ್ಲಿಸುವ ಸೃಷ್ಟಿಯ ಸೀಮಿತ ಪಾತ್ರದಂತೆ. ಭಾರತೀಯ ಜೀವನದಲ್ಲಿ ಸುಸ್ಥಿರತೆ, ನಿರಂತರತೆ, ಪರಿಸರವಾದಗಳು ಸಹಜವಾಗಿ ಹಾಸುಹೊಕ್ಕಾಗಿರುವುದು ಈ ಕಾರಣದಿಂದ. ಅದೇ ರೀತಿ, ಸ್ಥಿತಿಯೊಳಗಿನ ಅವಿಭಾಜ್ಯ ಅಂಶವಾಗಿರುವುದರಿಂದ ಸೃಷ್ಟಿ ಎಂದಿಗೂ ಕೀಳಲ್ಲ. ಇದು ಸ್ಥಿತಿಯ ಸಹಜ ಸ್ವಭಾವ. ಸ್ಥಿತಿಯು ಸಮತೋಲನದಲ್ಲಿದ್ದರೂ ಅಲ್ಲಿಯೇ ಇರುವುದಿಲ್ಲ. ಇನ್ನೊಂದು ಸಮತೋಲಿತ ಸ್ಥಿತಿಗೆ ಚಲಿಸಬಯಸುತ್ತದೆ. ಆದ್ದರಿಂದ, ಸೃಷ್ಟಿ ಅಗತ್ಯ ಮತ್ತು ಆದ್ದರಿಂದ ಹೊಸ ವಸ್ತುಗಳ ಸೃಷ್ಟಿ, ಆದ್ದರಿಂದ ಬ್ರಹ್ಮಾಂಡದ ಸಂಪನ್ಮೂಲಗಳ ಬಳಕೆ. ಆದರೂ ಹೊಸ ಸ್ಥಿತಿ ಸಮತೋಲನದಲ್ಲಿರಬೇಕು, ಆದ್ದರಿಂದ ಸೃಷ್ಟಿಗೆ ಮಿತಿ, ಆದ್ದರಿಂದ ಸೃಷ್ಟಿಯ ಉದ್ದೇಶಕ್ಕಾಗಿ ಸಂಪನ್ಮೂಲಗಳ ಸೀಮಿತ ಬಳಕೆ. ಕಾಮ ಮತ್ತು ಅರ್ಥವು ಸೃಷ್ಟಿಯಲ್ಲಿದೆ. ಎಲ್ಲಾ ಸೃಷ್ಟಿ ಮತ್ತು ಸಂಪನ್ಮೂಲಗಳ ಬಳಕೆಯು ಕಾಮ ಮತ್ತು ಅರ್ಥದ ಭಾಗವಾಗಿದೆ, ಅದು ಸೃಷ್ಟಿಯೊಳಗೆ ಮತ್ತು ಸ್ಥಿತಿಗೆ ಅಧೀನವಾಗಿದೆ. ಇದು ಭಾರತೀಯ ದೃಷ್ಟಿಕೋನ. 
  4. ಸೃಷ್ಟಿಯ (ಅರ್ಥ, ಕಾಮ) ಸಮತೋಲನವನ್ನು ನಾವು ಸಾಧಿಸುವುದು ಮೋಕ್ಷವನ್ನು ಮಾರ್ಗದ ಸಾಧನೆಯ ಮೂಲಕ. ಅರ್ಥ-ಕಾಮಗಳ ನಿಯಂತ್ರಣ ಮೋಕ್ಷ-ಮಾರ್ಗದಿಂದಲೇ. ಅದರ ಮೂಲಕವೇ ಧರ್ಮ. ಅದೇ ಮಾರ್ಗದಲ್ಲಿಯೇ ನಮ್ಮ ದೈನಿಕ ಸೌಮದರ್ಯದ ಸಾಧನೆ. ಸೌಂದರ್ಯವನ್ನು ಅರ್ಥ ಮತ್ತು ಕಾಮದ ಭೋಗದಲ್ಲಿ ಮಾತ್ರವಲ್ಲದೆ ಮತ್ತು ಮೋಕ್ಷವನ್ನು ಸಾಧನೆಯ ಮಾರ್ಗದಲ್ಲಿಯೂ ನಾವು ಕಾಣುತ್ತೇವೆ ಅನುಭವಿಸುತ್ತೇವೆ. ಆದ್ದರಿಂದ, ಈ ಸಿದ್ಧಾಂತ ನಿಜವಾದ ಅನುಭವವಾಗಿ ತನ್ಮೂಲಕ ಸುಸ್ಥಿರತೆ ಮತ್ತು ಪರಿಸರವಾದವನ್ನು ಅದರ ನೈಸರ್ಗಿಕ ಫಲಿತಾಂಶವನ್ನಾಗಿ ಮಾಡುತ್ತದೆ.

ಈ ಜೀವನ ಮಾರ್ಗಕ್ಕೆ ಧ್ಯಾನ, ಮನನ, ನಿಧಿಧ್ಯಾಸನಗಳು ಅಗತ್ಯ ಎಂದು ಸಂಪ್ರದಾಯವು ಒತ್ತಿಹೇಳುತ್ತದೆ. ಅದಕ್ಕೆ ಹೊಂದಿಕೊಂಡಂತಹ ಸಮಾಜದ ಒಂದು ವಿಶಿಷ್ಟವಾದ ಶಿಲ್ಪವನ್ನು ಭಾರತೀಯ ಪರಂಪರೆ ಸಾಧಿಸಿದೆ. ಸಮಾಜದ ಒಂದು ವಿಶಿಷ್ಟ ರೂಪುರೇಷೆಯಿಲ್ಲದೆ  ಒಬ್ಬ ವ್ಯಕ್ತಿಯು ಅಂತಹ ಮಾರ್ಗವನ್ನು ಸ್ವಂತವಾಗಿ ಅನುಸರಿಸುವುದು ಕಷ್ಟ. ಅಂತಹ ವಾಸ್ತುಶಿಲ್ಪದ ನಿರ್ಮಾಣಕ್ಕೆ ಶಿಸ್ತು, ದೂರದೃಷ್ಟಿ ಮತ್ತು ಬುದ್ಧಿಶಕ್ತಿಯ ಅಗತ್ಯವಿರುತ್ತದೆ – ಮಹಾನ್ ಋಷಿಗಳ ಎಲ್ಲಾ ಗುಣಲಕ್ಷಣಗಳು – ಋಷಿಗಳು. ಈ ಶಿಲ್ಪವನ್ನು ಬೌದ್ಧಿಕವಾಗಿ ಅಥವಾ ಬೇರೆ ರೀತಿಯಲ್ಲಿ ತಿಳಿದುಕೊಳ್ಳುವುದು ಅಥವಾ ಅದರ ಬಗ್ಗೆ ನಮ್ಮ ಅರಿವನ್ನು ಹೆಚ್ಚಿಸುವುದು – ಅದರ ಕಡೆಗೆ ಶ್ರಮಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ಹೀಗೆ ಪುರುಷಾರ್ಥ, ಸೃಷ್ಟಿ-ಸ್ಥಿತಿ-ಲಯ-ಋತ ಗಳ ಪರಿಕಲ್ಪನೆಯಿಂದ ನಿರ್ಮಿತಾವಾದ ತತ್ವಶಾಸ್ತ್ರ/ಸಿದ್ಧಾಂತಗಳು ಮತ್ತು ಅವುಗಳಿಂದ ಉದ್ಭವಿಸಿದ ಸಂಪ್ರದಾಯಗಳು – ಸುಸ್ಥಿರತೆಯನ್ನು ನಮ್ಮ ನಾಗರಿಕತೆಯ ಅವಿಭಾಜ್ಯ ಮತ್ತು ನೈಸರ್ಗಿಕ ಅಂಶವನ್ನಾಗಿ ಮಾಡಿವೆ.

Feature Image Credit: Dreamstime.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.