ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.
ಹಿಂದಿನ ಲೇಖನದಲ್ಲಿ ನಾವು ಋತ ಮತ್ತು ಋಷಿಗಳ ಕುರಿತಾಗಿ ಚರ್ಚಿಸಿದೆವು. ಹೀಗೆ, ಅತ್ಯುನ್ನತವಾದ ತನ್ನ ಸ್ವರೂಪದಲ್ಲಿ ಬ್ರಹ್ಮಾಂಡವು ನಿರಂತರ ಚಲನೆಯಲ್ಲಿರುತ್ತದೆ. ಮತ್ತು ಈ ಚಲನೆಯನ್ನು ವಿಶ್ವನಿಯಾಮಕವಾದ ತತ್ವ ಸಮೂಹಕ್ಕೆ ಅನುಗುಣವಾಗಿ ನಡೆಸುತ್ತದೆ, ತನ್ನನ್ನು ತಾನೇ ನಿರಂತರವಾಗಿ ಬದಲಾಯಿಸಿಕೊಳ್ಳುತ್ತದೆ. ಆ ತತ್ವ ಸಮೂಹವೇ ಋತ. ಬ್ರಹ್ಮಾಂಡದ ಈ ಸ್ವರೂಪದಲ್ಲಿ ಅದರಲ್ಲಿನ ವಸ್ತು ಮತ್ತು ಮನಸ್ಸು ಎರಡರಲ್ಲೂ ನೈಸರ್ಗಿಕವಾದ ರೀತಿಯಲ್ಲಿ ಹಳೆಯದರ ವಿಸರ್ಜನೆ ಮತ್ತು ಹೊಸದರ ಸೃಜನ-ದಿಂದ ಕೂಡಿರುತ್ತದೆ. ಅರ್ಥಾತ್ ಇದು ಋತಕ್ಕೆ ಅನುಗುಣವಾಗಿರುತ್ತದೆ. ಪರಿಣಾಮವಾಗಿ, ಮಾನವಕುಲದ ಪ್ರಾಥಮಿಕ ಕಾಳಜಿ ಬ್ರಹ್ಮಾಂಡವನ್ನು ಅದರ ಅತ್ಯುನ್ನತ ಸ್ವರೂಪದಲ್ಲಿ ನಡೆಸುವುದು. ಅರ್ಥಾತ್, ಋತಕ್ಕೆ ಅನುಗುಣವಾಗಿ ಈ ಬದಲಾವಣೆಯನ್ನು ನಿರ್ದೇಶಿಸಬೇಕು ಎನ್ನುವುದಾಗಿದೆ. ಇದೇಕೆ ಮುಖ್ಯವೆಂದರೆ – ಮನುಷ್ಯ ಪ್ರಯತ್ನ ಋತಕ್ಕೆ ವಿರುದ್ಧವಾಗಿ ಸಾಗುವ ಶಕ್ತಿಯನ್ನು ಪಡೆದುಕೊಂಡಿರುವುದರಿಂದ.
ಬ್ರಹ್ಮಾಂಡದ ಈ ನಿರಂತರ ಚಲನೆ – ಹರಿವು- ಯನ್ನು ನಿಯಂತ್ರಿಸುವ ತತ್ವಗಳನ್ನು ಒಟ್ಟಾರೆಯಾಗಿ ಋತ ಎಂದು ಕರೆದಿರುವುದಾದರೆ, ಈ ಹರಿವನ್ನೇ ನಮ್ಮ ತತ್ವಶಾಸ್ತ್ರದಲ್ಲಿ ‘ಸ್ಥಿತಿ’ ಎಂದು ಉಲ್ಲೇಖಿಸಲಾಗಿದೆ. ಸ್ಥಿತಿಯನ್ನು ಸಾಮಾನ್ಯವಾಗಿ ಕಾಲದ ಬಿಂದುವೊಂದರಲ್ಲಿ ವಸ್ತುವೊಂದರ ‘ಸ್ವರೂಪ’ ಎನ್ನುವ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಬ್ರಹ್ಮಾಂಡದ ಸ್ವರೂಪವೇ ಕ್ರಿಯಾತ್ಮಕವಾದುದು ಅಥವಾ ಚಲನೆಯಲ್ಲಿರುವುದು ಎಂದು ನಿರೂಪಿಸಲಾಗಿದೆ. ಇದು ಸ್ಥಿರತೆಯುಳ್ಳ ಆದರೆ ಸಮತೋಲನವಿರುವಂತಹ ಮಾರ್ಗವಾಗಿದೆ. ಆಂಗ್ಲ ಭಾಷೆಯಲ್ಲಿ ನಾವಿದನ್ನು “Dynamic Stable Equilibrium” ಎಂದು ಕರೆಯೋಣ. ಇದರ ಸ್ವರೂಪವೇನೆಂದರೆ
- ಇದು ಸ್ಥಿರವಾಗಿದೆ
- ಈ ಸ್ಥಿರತೆಯು ಸಮತೋಲನದಲ್ಲಿದೆ
- ಅದೇ ಕಾಲಕ್ಕೆ ಚಲೆನೆಯನ್ನು ಪಡೆದುಕೊಂಡಿದೆ – ಕ್ರಿಯಾತ್ಮಕವಾಗಿದೆ.
ಡೈನಾಮಿಕ್ ಎಂದರೆ ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಸಮತೋಲನ ಎಂದರೆ ಅದು ಬದಲಾಗುತ್ತಿರುವಾಗಲೂ, ಅದು ಪಡೆಯುವ ಪ್ರತಿಯೊಂದು ಹೊಸ ಸ್ಥಿತಿಯು ಸಮತೋಲನ ಸ್ಥಿತಿಯಲ್ಲಿದೆ ಮತ್ತು ಅಸ್ಥಿರವಾಗಿರುವುದಿಲ್ಲ. ಬ್ರಹ್ಮಾಂಡವು ಈ ಸ್ವರೂಪದಲ್ಲಿರುವಾಗ ಇದು ಒಂದು ನಿರ್ದಿಷ್ಟ ಸಾಮರಸ್ಯ ಮತ್ತು ಜೀವನದ ಔನ್ನತ್ಯವನ್ನು ಸಾಧಿಸುತ್ತದೆ.
ಇದ್ಕಕೊಂಡು ಸಾದೃಶ್ಯವನ್ನು ಕೊಡಬಹುದು. ವಿಶಾಲವಾದ ಸಮುದ್ರವೊಂದರ ಮೇಲೆ ಅನೇಕ ದ್ವೀಪಗಳನ್ನು ಕಲ್ಪಿಸಿಕೊಳ್ಳಿ. ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಸಾಗರದ ಮೇಲೆ ದೋಣಿ ಪ್ರಯಾಣವನ್ನೂ ಊಹಿಸಿಕೊಳ್ಳಿ. ಇಲ್ಲಿ ಎರಡು ಬಗೆಯ ದ್ವೀಪಗಳನ್ನ ಕಲ್ಪಿಸಿಕೊಳ್ಳಿ – ಸಮತೋಲನ-ಸಾಮರಸ್ಯಗಳಿರುವ ದ್ವೀಪಗಳು ಒಂದಾದರೆ ಅವಿಲ್ಲದ ದ್ವೀಪಗಳು ಇನ್ನಷ್ಟು. ಪ್ರತಿ ದ್ವೀಪದಲ್ಲೋ ದೋಣಿ ವಿಶ್ರಾಂತಿ ಪಡೆಯಬಹುದು. ಪ್ರತಿ ದ್ವೀಪದಿಂದ ಹೊರಬರಲು ಒಂದು ಮಾರ್ಗವಿದೆ. ಪೂರ್ತಿಯಾಗಿ ಸಮತೋಲನ-ಸಾಮರಸ್ಯ ದ್ವೀಪಗಳ ಮೂಲಕವೇ ಹಾದಿ ಹೋಗುವುದನ್ನು ಸಂಸ್ಕೃತದಲ್ಲಿ ‘ಸ್ಥಿತಿ’ ಎನ್ನುತ್ತಾರೆ.
ಇದು ಪರಿಪೂರ್ಣ ಸ್ಥಿತಿ, ಮತ್ತು ಜಗತ್ತು ಹೀಗಿರಬೇಕು ಎನ್ನುವುದು ಸನಾತನ ಧರ್ಮದ ಆಶಯ ಮತ್ತು ಪ್ರಯತ್ನ.
ವೈದಿಕ ದೃಷ್ಟಿ: ಸೃಷ್ಟಿ
ಸ್ಥಿತಿ ಎನ್ನುವುದು ಹೀಗಾದರೆ ಸೃಷ್ಟಿಯ ಬಗೆ ಏನು? ಸ್ಥಿತಿಯ ಒಳಗಿನ dynamic ಎನ್ನುವುದೇ ಆ ಸೃಷ್ಟಿ. ಸ್ಥಿತಿಯೇ ಬ್ರಹ್ಮಾಂಡದ ಸ್ವರೂಪವಾದ್ದರಿಂದ ಸೃಷ್ಟಿಯೂ ಸಹ ಅದೇ ರೀತಿಯಲ್ಲಿ ಬ್ರಹ್ಮಾಂಡದ ಸ್ವರೂಪ. ಈ ರೀತಿ – ಬ್ರಹ್ಮಾಂಡದಲ್ಲಿ ಹೊಸತು ಮೂಡುವುದು ಸ್ವಾಭಾವಿಕ ಮತ್ತು ಅವಶ್ಯಕ. ಆದಾಗ್ಯೂ, ಋತದಿಂದ ನಿಯಂತ್ರಿಸಲ್ಪಡುವ ಬ್ರಹ್ಮಾಂಡದ ‘ಸ್ಥಿತಿ’ ಯನ್ನು ನಿಜವಾದ ‘ಸೃಷ್ಟಿ’ ಅಸ್ಥಿರಗೊಳಿಸುವುದಿಲ್ಲ. dynamic ಸಮತೋಲನವನ್ನು ಅದು ತೊಂದರೆಗೊಳಿಸುವುದಿಲ್ಲ. ವೈದಿಕ ಸೃಷ್ಟಿ-ಯ ಪರಿಕಲ್ಪನೆಗೆ ಇದೋ ಮುಖ್ಯವಾದ ಧಾರ್ಮಿಕ ಗೆರೆ.
ಅರ್ಥಾತ್ ಮನುಷ್ಯ ಪ್ರಯತ್ನ ಏನನ್ನಾದರೂ ಹೊಸತನ್ನು ಮೂಡಿಸಬಹುದು. ಆದರೆ ಅದು ಸ್ಥಿತಿಗೆ ವಿಪರೀತವಾಗಿರಕೂಡದು ಎನ್ನುವುದು ವೈದಿಕ ದೃಷ್ಟಿಕೋನ. ಅಂದರೆ ಮನುಷ್ಯಪ್ರಯತ್ನದಿಂದ ಉಂಟಾಗುವ ಪ್ರತಿಯೊಂದು ಸೃಷ್ಟಿಯನ್ನೂ ವೈದಿಕ ದೃಷ್ಟಿಕೋನ ಸಂಭ್ರಮಿಸುವುದಿಲ್ಲ, ಅದು ಋತದ ಹಾದಿಯಲ್ಲಿ ಇದೆಯೋ ಇಲ್ಲವೋ ಎನ್ನುವುದು ಮುಖ್ಯ. ಋತ ಹಾದಿಯಲ್ಲಿರುವ ಮನುಷ್ಯ ಸೃಷ್ಟಿಯನ್ನು ಮಾತ್ರ ವೈದಿಕ ದೃಷ್ಟಿಕೋನ ಸಂಭ್ರಮಿಸುತ್ತದೆ.
ವೈದಿಕ ದೃಷ್ಟಿಕೋನದ ಪ್ರಪಂಚದ ಈ ಪರಿಕಲ್ಪನೆ ನಿರ್ಣಾಯಕವಾದ ಮಹತ್ತನ್ನು ಹೊಂದಿದೆ. ನಮ್ಮಲ್ಲಿ ಸೃಷ್ಟಿ ಮೂಲಭೂತವಾಗಿ ಸ್ಥಿತಿಗೆ ಅಧೀನವಾಗಿದೆ. ಋತ ಸೃಷ್ಟಿಗೆ ವಿಶಾಲವಾದ ಭೂಮಿಕೆಯನ್ನು ಕೊಡುವುದೇನೋ ಹೌದು. ಆದರೆ ಅದರ ಜೊತೆಯಲ್ಲಿಯೇ ಒಂದು ಗಡಿಯನ್ನೂ ತೋರಿಸುತ್ತದೆ. ಅದರಿಂದ ಹೊರಗೆ ಹೆಜ್ಜೆ ಹಾಕುವುದು ಅನಪೇಕ್ಷಿತ ಎನ್ನುತ್ತದೆ ವೈದಿಕ ದೃಷ್ಟಿಕೋನ.
ವೈದಿಕ ದೃಷ್ಟಿಕೋನದಲ್ಲಿ ಸೃಷ್ಟಿಯು ಸಕಾರಾತ್ಮಕವಾದ ಕ್ರಿಯಾತ್ಮಕ ಶಕ್ತಿಯಾಗಿದೆ. ಅದು ಹೊಸದನ್ನು ಸೃಷ್ಟಿಸುವ ಮೂಲಕ ಜೀವನದಲ್ಲಿ ಬದಲಾವಣೆಯನ್ನು ಸಾಧ್ಯವಾಗಿಸುತ್ತದೆ. ಸಾಗರ ಮತ್ತು ದ್ವೀಪಗಳ ಸಾದೃಶ್ಯಕ್ಕೆ ಹೋಗುವುದಾದರೆ – ಅದು ಹೊಸ ದೋಣಿಗಳನ್ನು ರಚಿಸಲು ಮತ್ತು ಹೊಸ ಮಾರ್ಗಗಳನ್ನು ಅನ್ವೇಷಿಸಲು, ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ಸಂಚಾರ ಮಾಡಲು ಪ್ರೇರೇಪಕ ಶಕ್ತಿಯಾಗಿದೆ. ಲಯವು ಹಿಂದಿನ ಸೃಷ್ಟಿಯ ವಸ್ತುವನ್ನು ಕೊನೆಗೊಳಿಸುವ ಕ್ರಿಯಾತ್ಮಕ ಶಕ್ತಿಯಾಗಿದ್ದು, ಹೊಸದಕ್ಕೆ ಜಾಗವನ್ನು ಸೃಷ್ಟಿಸುತ್ತದೆ. ಹಳೆಯ ದೋಣಿಗಳನ್ನು ನಾಶಪಡಿಸುವ ಅವಶ್ಯಕತೆಯಿದೆ. ಇದರಿಂದ ಹೊಸ ದೋಣಿಗಳನ್ನು, ಹೊಸ ಮಾರ್ಗಗಳಿಗಾಗಿ ರಚಿಸುವುದು ಸಾಧ್ಯವಾಗುತ್ತದೆ. ಅದೇ ರೀತಿಯಲ್ಲಿ, ಕೆಟ್ಟ ಮಾರ್ಗಗಳಿಂದ ಒಳ್ಳೆಯ ಮಾರ್ಗಗಳಿಗೆ ನಡೆಯುವುದಕ್ಕೆ ಕೂಡ ಸೃಷ್ಟಿ ಅವಶ್ಯಕವಾಗುತ್ತದೆ.
Feature Image Credit: dreamstime.com
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.