ಭಗವದ್ಗೀತೆಯನ್ನು ಏಕೆ ಓದಬೇಕು?

ಗೀತೆಯ ಸಾರವನ್ನು ಒಂದು ಪಂಕ್ತಿಯಲ್ಲಿ ಹೇಳಬೇಕೆಂದರೆ, ಇದನ್ನು ಹೇಳಬಹುದು. ಪರಮಾತ್ಮ ತತ್ತ್ವವನ್ನು ಗೋಚರಿಸಿಕೊಳ್ಳುವುದು ಹೇಗೆ? ಇದಕ್ಕೆ ಮೂರು ಹಾದಿಗಳನ್ನು ಭಗವಂತ ತಿಳಿಸುತ್ತಾನೆ: ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ. ಸ್ಥೂಲವಾಗಿ, ಮೊದಲ ಆರು ಅಧ್ಯಾಯಗಳಲ್ಲಿ ಕರ್ಮಯೋಗದ ವಿವರಣೆಯಿದೆ, ಮುಂದಿನ ಆರು ಅಧ್ಯಾಯಗಳಲ್ಲಿ ಭಕ್ತಿಯೋಗದ ವಿವರಣೆಯಿದೆ, ಕೊನೆಯ ಆರು ಅಧ್ಯಾಯಗಳಲ್ಲಿ ಜ್ಞಾನಯೋಗದ ವಿವರಣೆಯಿದೆ