ಅಮರುಕ ಶತಕವು ಕಾವ್ಯ ಸೌಂದರ್ಯಕ್ಕೆ ಒಂದು ಮಾದರಿಯಾಗಿದ್ದರೆ, ನಮ್ಮ ಚರಿತ್ರೆಯನ್ನು ಅರಿಯಲು ಇನ್ನೊಂದು ಕೈಗನ್ನಡಿಯಾಗಿದೆ. ಎಷ್ಟೋ ಬಾರಿ, ನಮ್ಮ ಹಿಂದಿನ ಇತಿಹಾಸಕ್ಕೆ ಆಧಾರಗಳು ಕಡಿಮೆಯೆಂಬ ದೂರು ನೀವು ಕೇಳಿರಬಹುದು. ಆದರೆ, ಇಂತಹ ಕಾವ್ಯಗ್ರಂಥಗಳನ್ನೂ ಒಳಹೊಕ್ಕು ನೋಡಿದಾಗ, ಸಂಸ್ಕೃತಿಯ ಒಳಸೆಲೆ ತಿಳಿಯುವುದು ನಿಚ್ಚಳ. ಇದಕ್ಕೆ ಹಲವು ಭಾರತೀಯ ಭಾಷೆಗಳನ್ನು ಬಲ್ಲ ಇತಿಹಾಸಕಾರರು ಬೇಕು.