ಕಥಾಮಾಲಿಕೆ- ಗುರುವಾಕ್ಯ ಪರಿಪಾಲನೆ

ಮಕ್ಕಳಿಗೆ, ಈಗ ತಾನೇ ೫-೬ನೇ ತರಗತಿ-ಗೆ ಬರುತ್ತಿರುವ ಹುಡುಗ ಹುಡುಗಿಯರಿಗೆ ಮೊದ-ಮೊದಲು ಹೇಳುವ ಕಥೆ – ಆರುಣಿ ಮತ್ತು ಉಪಮನ್ಯುವಿನ ಕಥೆ. ಮಹಾಭಾರತದ ಆದಿಪರ್ವದಲ್ಲೇ ಬರುವ ಈ ಕಥೆಗಳು ಅತ್ಯಂತ ಸರಳವಾಗಿದ್ದರೂ, ಮನಸ್ಸಿನ ಮೇಲೆ ಆಳವಾದ ಪರಿಣಾಮವನ್ನು ಬೀರಬಲ್ಲಂಥವು. ಇದು ಗುರು-ವಾಕ್ಯಪರಿಪಾಲನೆಯಲ್ಲದೇ, ಗುರು-ಶಿಷ್ಯ ಸಂಬಂಧದ ಆಳವನ್ನು ಎತ್ತಿ ತೋರಿಸುವಂತಹ ಕಥೆಗಳು. ಇದನ್ನು ಓದುವ ಮಕ್ಕಳು ಶಿಷ್ಯರಾಗಲು ತಯಾರಾಗುವಂತೆಯೇ, ಓದುವ ಶಿಕ್ಷಕರು ಗುರುವಾಗಲು ತಪಸ್ಸು ನಡೆಸಬೇಕಾಗುತ್ತದೆ.