ದೀಪಾವಳಿ ಭಾರತೀಯರ ಬಹುಪ್ರಮುಖ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ, ಪ್ರತಿಯೊಂದು ಪ್ರದೇಶದಲ್ಲೂ ದೀಪಾವಳಿಯನ್ನು ಅತಿಸಂಭ್ರದಿಂದ ಆಚರಿಸುತ್ತಾರೆ. ಕರ್ನಾಟಕದಲ್ಲಿ ನಾಲ್ಕು ದಿನಗಳ ಹಬ್ಬವಾದರೂ ಮೂರು ದಿನಗಳಂತೂ ವಿಶೇಷ ಸಂಭ್ರಮವಿರುತ್ತದೆ. ಅನೇಕ ಆಚರಣೆಗಳು, ವಿಶಿಷ್ಟ ಪೂಜೆ, ಅನೇಕ ರೀತಿಯ ಸಂಭ್ರಮ – ಹೀಗೆ ಹಬ್ಬದ ಪ್ರತಿಯೊಂದು ಕ್ಷಣವೂ ಒಂದು ವಿಶೇಷ ಅನುಭವ. ಪಟಾಕಿಯ ಸದ್ದಿನಿಂದ ನರಕಾಸುರನನ್ನು ಸುಟ್ಟರೆ, ದೀಪಗಳ ದಿವ್ಯಮೌನದಲ್ಲಿ ಬಲೀಂದ್ರನನ್ನು ನೆನೆಸಿಕೊಳ್ಳುತ್ತೇವೆ. ಇತಿಹಾಸ-ಪುರಾಣಗಳಲ್ಲಿ, ಕಾವ್ಯದಲ್ಲಿ ದೀಪವಾಳಿಯ ಆ ಕಾಲದ ಸಂಭ್ರಮವನ್ನು ನಾವು ಕಾಣಬಹುದು.
ಹೀಗೆ ನಮ್ಮ ಪ್ರಜ್ಞೆಯ ಆಳದಲ್ಲಿ ಭದ್ರವಾಗಿರುವ ದೀಪಾವಳಿಯ ದಿನ ಒಂದು ವಿಶಿಷ್ಟ ಸಂವಾದವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಂಡಿಕಾ ಟುಡೇ ಸಂತೋಷ ಪಡುತ್ತದೆ. ಸಂಸ್ಕೃತಿ ಚಿಂತಕರಾದ ಡಾ|| ಆರತಿ ವಿ.ಬಿ. ನಿಮಗೆ ಗೊತ್ತಲ್ಲವೇ? ಅವರು ವಿಭು ಅಕ್ಯಾಡಮಿಯ ಸ್ಥಾಪಕ ಮುಖ್ಯಸ್ಥರು, ಸಂಸ್ಕೃತ ಅಧ್ಯಾಪಕರು ಮತ್ತು ಸಂಸ್ಕೃತಿ ಚಿಂತಕರು. ನಮ್ಮ ದೀಪಾವಳಿಯ ಸಾಂಸ್ಕೃತಿಕ ಪರಂಪರೆ, ಭಾರತೀಯ ಸಮಾಜದ ಇವತ್ತಿನ ಸ್ಥಿತಿ-ಗತಿ, ತಮ್ಮ ವಿಭು ಅಕ್ಯಾಡಮಿ ಭಾರತೀಯ ಸಂಸ್ಕೃತಿಯನ್ನು ಹರಡುತ್ತಿರುವ ಬಗೆ ಇವೆಲ್ಲದರ ಕುರಿತು ಅವರೊಂದಿಗೆ ನಡೆಸಿದ ಒಂದು ಚಿಕ್ಕ ಸಂವಾದ ಇಲ್ಲಿದೆ.
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.